ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿಸ್ ನಂದಿನಿ’ ಸಿನಿಮಾ ಇಂದು ತೆರೆಗೆ: ಪ್ರಮುಖ ಪಾತ್ರದಲ್ಲಿ ಸೃಷ್ಟಿ

Last Updated 6 ಜನವರಿ 2023, 6:21 IST
ಅಕ್ಷರ ಗಾತ್ರ

ಬೆಳ್ತಂಗಡಿ: ಸರ್ಕಾರಿ ಶಾಲಾ ಶಿಕ್ಷಣದ ಕುರಿತ ಕಥಾಹಂದರ ಇರುವ ‘ಮಿಸ್ ನಂದಿನಿ’ ಸಿನಿಮಾ ಜ.6ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದ್ದು, ಈ ಚಿತ್ರದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಬಾಲಪ್ರತಿಭೆ ಸೃಷ್ಟಿ ಕೊಯ್ಯೂರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ತಾಲ್ಲೂಕಿನ ಕೊಯ್ಯೂರು ಗ್ರಾಮದ ವೇದಾ ಅವರ ಪುತ್ರಿ ಸೃಷ್ಟಿ ಕೊಯ್ಯೂರು ಈಗಾಗಲೇ ಕಾಂತಾರ, ಪದವಿಪೂರ್ವ ಚಿತ್ರಗಳಲ್ಲಿ ನಟಿಸಿದ್ದು, ‘ಮಿಸ್ ನಂದಿನಿ’ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಗುರುದತ್ತ ಎಸ್. ಆರ್ ನಿರ್ದೇಶನದ ಈ ಚಿತ್ರದಲ್ಲಿ ಚಿತ್ರದ ನಾಯಕಿ ಪ್ರಿಯಾಂಕಾ ಉಪೇಂದ್ರ ಅವರು ಹಳ್ಳಿಗೆ ವರ್ಗವಾಗಿ ಬರುವ ಸರ್ಕಾರಿ ಶಿಕ್ಷಕಿಯ ಪಾತ್ರ ಮಾಡಿದ್ದಾರೆ. ಗೋಪಾಲ್ ದೇಶಪಾಂಡೆ, ರಘು ಪಾಂಡೇಶ್ವರ, ಅಪ್ಪಣ್ಣ, ಕೆ. ಪಿ.ಶ್ರೀಧರ್, ಜಗ್ಗಪ್ಪ ಮುಂತಾದ ತಾರಾಗಣ ಇದೆ.

ಪ್ರಥಮ ಪಿಯುಸಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಸೃಷ್ಟಿ ಕೊಯ್ಯೂರು ಉತ್ತಮ ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

‘ಮಿಸ್ ನಂದಿನಿ ವಿಭಿನ್ನವಾದ ಚಿತ್ರವಾಗಿದ್ದು, ನನಗೆ ಸಿಕ್ಕಿದ ಪಾತ್ರ ಕೂಡ ವಿಭಿನ್ನವಾಗಿದೆ. ಸರ್ಕಾರಿ ಶಾಲೆಯ ಬಗ್ಗೆ ಒಲವು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಚಿತ್ರವು ಸರ್ಕಾರಿ ಶಾಲೆಗಳ ಸ್ಥಿತಿ, ಅದರ ಮುಚ್ಚುವಿಕೆ ಮತ್ತು ಸಮಸ್ಯೆಗೆ ಪರಿಹಾರವನ್ನು ತೋರಿಸುತ್ತದೆ. ಕನ್ನಡ ಭಾಷೆಯ ಪ್ರಾಮುಖ್ಯತೆಯ ಬಗ್ಗೆಯೂ ಚಿತ್ರವು ಚರ್ಚಿಸುತ್ತದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಬೇಕು’ ಎನ್ನುತ್ತಾರೆ ಸೃಷ್ಟಿ ಕೊಯ್ಯೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT