ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಟ್ಟೇರಿತು ಹೊಸಬರ ‘ದ ಪ್ರಸೆಂಟ್’

Published 25 ಜೂನ್ 2024, 18:58 IST
Last Updated 25 ಜೂನ್ 2024, 18:58 IST
ಅಕ್ಷರ ಗಾತ್ರ

ಬಹುತೇಕ ಹೊಸಬರಿಂದಲೇ ಕೂಡಿರುವ ‘ದ ಪ್ರೆಸೆಂಟ್‌’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ನಿರ್ಮಾಣದ ಈ ಚಿತ್ರವನ್ನು ಶಿವಪೂರ್ಣ ನಿರ್ದೇಶಿಸುತ್ತಿದ್ದಾರೆ.

‘ಚಿತ್ರಕಥೆ ಸಿದ್ಧಪಡಿಸಲು ಒಂದು ವರ್ಷ ಸಮಯ ತೆಗೆದುಕೊಂಡಿದೆ. ಒಂದು ಆತ್ಮದ ಮೂರು ಜನ್ಮದ ಕಥೆ ಒಳಗೊಂಡಿದೆ. ಭೂತ, ಭವಿಷ್ಯ, ವರ್ತಮಾನ ಎಂದು ಮೂರು ಭಾಗಗಳಲ್ಲಿ ಬರಲಿದೆ. ಬೆಂಗಳೂರು ಮತ್ತು ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಪ್ರಶಾಂತ್‌ ಸಿದ್ದಿ ಸಂಗೀತವಿದೆ. ಟಾಲಿವುಡ್‌ನಲ್ಲಿ ಹೆಸರು ಮಾಡಿರುವ ಹಿರಿಯ ಛಾಯಾಗ್ರಾಹಕ ಪ್ರಸಾದ್ ಪುಲಿಚರ್ಲ ನಮ್ಮ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ’ ಎಂದರು ನಿರ್ದೇಶಕರು.

ರಾಜೀವ್‌ ರಾಥೋಡ್ ನಾಯಕನಾಗಿ ನಟಿಸುತ್ತಿದ್ದಾರೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳ ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ. ದಿಯಾ, ಮಾನಸಗೌಡ ನಾಯಕಿಯರು. ಬೇಬಿ ಆರಾಧ್ಯ, ಅವಿನಾಶ್, ಶ್ರೀಧರ್ ಮುಂತಾದವರು ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT