ಮಂಗಳವಾರ, ಜನವರಿ 25, 2022
25 °C

ಖಾಸಗಿಯಾಗಿ ನಡೆಯಲಿದೆ ಕತ್ರಿನಾ– ವಿಕ್ಕಿ ವಿವಾಹ ಸಮಾರಂಭ 

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್ ತಾರೆಗಳಾದ ಕತ್ರಿನಾ ಕೈಫ್(38) ಮತ್ತು ವಿಕ್ಕಿ ಕೌಶಲ್(33) ಮುಂದಿನ ವಾರ ರಾಜಸ್ಥಾನದಲ್ಲಿ ವಿವಾಹವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 7 ರಿಂದ 9ರವರೆಗೆ ರಾಜಸ್ಥಾನದಲ್ಲಿ ವಿವಾಹ, ಸಂಗೀತ ಹಾಗೂ ಮೆಹಂದಿ ಕಾರ್ಯಕ್ರಮಗಳು ನಡೆಯಲಿವೆ.

‘ಈ ಸಮಾರಂಭದಲ್ಲಿ ಹತ್ತಿರದ ಸಂಬಂಧಿಗಳು, ಕುಟುಂಬದ ಆಪ್ತರು ಮತ್ತು ಸ್ನೇಹಿತರು ಮಾತ್ರ ಹಾಜರಿರುತ್ತಾರೆ. ಆ ನಂತರದ ಕೆಲ ದಿನಗಳಲ್ಲಿ ಬಾಲಿವುಡ್‌ನ ವೃತ್ತಿ ಬಾಂಧವರಿಗಾಗಿ ಸಮಾರಂಭವನ್ನು ಏರ್ಪಡಿಸಲಾಗುತ್ತದೆ‘ ಎಂದು ತಿಳಿದುಬಂದಿದೆ.

ವಿವಾಹ ಕಾರ್ಯಕ್ರಮವನ್ನು ಅತ್ಯಂತ ಖಾಸಗಿ ಸಮಾರಂಭವಾಗಿ ನಡೆಸಲು ವಿಕ್ಕಿ-ಕತ್ರೀನಾ ಜೋಡಿ ಬಯಸಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು