‘ಕೆಜಿಎಫ್‌’ಗೆ ರಾನಾ ದಗ್ಗುಬಾಟಿ ಫಿದಾ

7

‘ಕೆಜಿಎಫ್‌’ಗೆ ರಾನಾ ದಗ್ಗುಬಾಟಿ ಫಿದಾ

Published:
Updated:

ಬೆಂಗಳೂರು: ಪ್ರಶಾಂತ್‌ ನೀಲ್‌ ನಿರ್ದೇಶನದ ‘ರಾಕಿಂಗ್‌ ಸ್ಟಾರ್’ ಯಶ್‌ ನಟನೆಯ ‘ಕೆಜಿಎಫ್‌’ ಚಿತ್ರ 50 ದಿನಗಳನ್ನು ಪೂರ್ಣಗೊಳಿಸಿ ಯಶಸ್ಸಿನ ನಾಗಾಲೋಟವನ್ನು ಮುಂದುವರಿಸಿದೆ. ಬಿಡುಗಡೆಯಾದ ದಿನದಂದೇ ಸಿನಿಮಾ ವೀಕ್ಷಿಸಿದ ಬಾಲಿವುಡ್‌, ಕಾಲಿವುಡ್‌ ಮತ್ತು ಟಾಲಿವುಡ್‌ನ ನಟ, ನಟಿಯರು ಕೆಜಿಎಫ್‌ ತಂಡಕ್ಕೆ ಶುಭಾಶಯದ ಮಳೆ ಸುರಿಸಿದ್ದರು.

ಆದರೆ, ‘ಬಾಹುಬಲಿ’ ಚಿತ್ರದ ಖ್ಯಾತಿಯ ರಾನಾ ದಗ್ಗುಬಾಟಿ ಮಾತ್ರ ಈ ಸಿನಿಮಾ ನೋಡಿರಲಿಲ್ಲ. ಇಂದು ಅವರು ಕೆಜಿಎಫ್‌ ಚಿತ್ರ ನೋಡಿ ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಿ ಫಿದಾ ಆಗಿರುವ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ.

‘ನಾನು ತಡವಾಗಿ ಕೆಜಿಎಫ್ ಸಿನಿಮಾ ಚಾಪ್ಟರ್ 1 ನೋಡಿದ್ದೇನೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಯಶ್ ಹಾಗೂ ಪ್ರಶಾಂತ್ ನೀಲ್ ನೇತೃತ್ವದ ತಂಡದ ಶ್ರಮಕ್ಕೆ ಅಭಿನಂದನೀಯ. ಧೀರ ಧೀರ... ಸುಲ್ತಾನ...’ ಹಾಡು ನನಗೆ ತುಂಬಾ ಇಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 26

  Happy
 • 3

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !