ಬೆಂಗಳೂರು: ಕಿರುತೆರೆ ಹಾಗೂ ಬಾಲಿವುಡ್ ಸ್ಟಾರ್ ಮೌನಿ ರಾಯ್ ಇತ್ತೀಚೆಗೆ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಅವರ ಮದುವೆ ಬಗ್ಗೆ ಮಾತು ಕೇಳಿ ಬಂದಿದ್ದು ಮುಂದಿನ ವರ್ಷ ಜನವರಿಯಲ್ಲಿ ಅವರು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ಮೌನಿ ರಾಯ್ ವರಿಸಲಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಮೌನಿ ಸಹೋದರ ವಿದ್ಯುತ್ ರಾಯ್ ಸರ್ಕಾರ್, ಪತ್ರಿಕಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ, ಮೌನಿ ಮಾತ್ರ ಈ ವಿಚಾರದಲ್ಲಿ ಮೌನ ಮುರಿದಿಲ್ಲ.
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ದುಬೈನಲ್ಲಿಯೇ ಇದ್ದ ಮೌನಿ, ಸೂರಜ್ ಜೊತೆ ಓಡಾಡಿಕೊಂಡಿದ್ದರು. ಸೂರಜ್‌ರನ್ನು ಮೌನಿ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.
ಮೌನಿ ರಾಯ್ ಕೆಜಿಎಫ್ ಚಾಪ್ಟರ್1ರ ಹಿಂದಿ ಆವೃತ್ತಿಯಲ್ಲಿ 'ಗಲೀ ಗಲೀ' ಐಟಂ ನೃತ್ಯದಲ್ಲಿ ಕಾಣಿಸಿಕೊಂಡಿದ್ದರು. ಇದು ಬಾಲಿವುಡ್‌ನಲ್ಲಿ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು.
ಅಂದಹಾಗೇ ಮೌನಿ ರಾಯ್‌ಗೆ ಇನ್‌ಸ್ಟಾಗ್ರಾಂನಲ್ಲಿ 20 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.