ಶುಕ್ರವಾರ, ಅಕ್ಟೋಬರ್ 18, 2019
20 °C

ಕಿಚ್ಚನ ಹೊಸ ‘ಫ್ಯಾಂಟಂ’

Published:
Updated:
Prajavani

ನಟ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಬಹು ನಿರೀಕ್ಷೆಯ ಹೊಸ ಸಿನಿಮಾ ‘ಫ್ಯಾಂಟಂ’ ಸದ್ಯದಲ್ಲೇ ಸೆಟ್ಟೇರಲಿದೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿಬರಲಾರಂಭಿಸಿದೆ.

‘ಸುದೀಪ್ ಹಾಗೂ ನಾನು ‘ಬಿಲ್ಲ ರಂಗ ಬಾಷಾ’ ಚಿತ್ರಕ್ಕೂ ಮುನ್ನ ಶಾಲಿನಿ ಆರ್ಟ್ಸ್ ನಿರ್ಮಾಣದಲ್ಲಿ ಮತ್ತೊಂದು ಅದ್ದೂರಿ ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದೇವೆ. ಈ ಚಿತ್ರದ ಶೀರ್ಷಿಕೆ, ತಾರಾಗಣ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹ ಸದಾ ಇರಲಿ’ ಎಂದು ಅನೂಪ್‌ ಸಾಮಾಜಿಕ ಜಾಲಾತಾಣದಲ್ಲಿ ಬರೆದುಕೊಂಡಿರುವುದು ಈ ಮಾತಿಗೆ ಪುಷ್ಟಿ ನೀಡಿದೆ.

ಅನೂಪ್ ಭಂಡಾರಿ ತಂಡ ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಚಿತ್ರದ ಶೀರ್ಷಿಕೆಯನ್ನು ಅಧಿಕೃತವಾಗಿ ಪ್ರಕಟಿಸುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ‘ಫ್ಯಾಂಟಂ’ ಶೀರ್ಷಿಕೆ ವೈರಲ್‌ ಆಗಿರುವುದು ಚಿತ್ರತಂಡಕ್ಕೂ ಅಚ್ಚರಿ ಮೂಡಿಸಿದೆಯಂತೆ.

‘ಕೋಟಿಗೊಬ್ಬ-3’ ಚಿತ್ರೀಕರಣಕ್ಕಾಗಿ ಪೋಲ್ಯಾಂಡ್‌ಗೆ ತೆರಳಿದ್ದ ಸುದೀಪ್, ಒಂದು ವಾರದಿಂದ ಪೋಲ್ಯಾಂಡ್‌ನಲ್ಲಿ ಇದ್ದು, ಚಿತ್ರೀಕರಣ ಮುಗಿಸಿ ಈಗ ಭಾರತಕ್ಕೆ ವಾಪಾಸಾಗುತ್ತಿದ್ದಾರೆ. ಹೈ ವೋಲ್ಟೇಜ್ ಚೇಸಿಂಗ್ ದೃಶ್ಯ ಸೆರೆಹಿಡಿಯಲು ಚಿತ್ರತಂಡ ಪೋಲ್ಯಾಂಡ್‌ಗೆ ತೆರಳಿತ್ತು. ‘ಕೋಟಿಗೊಬ್ಬ-3’ ಮತ್ತು ‘ದಬಾಂಗ್-3’ ಹಾಗೂ ಕಲರ್ಸ್‌ ಕನ್ನಡದ ಬಿಗ್‌ ಬಾಸ್‌ ಸೀಸನ್‌ 7 ಕಾರ್ಯಕ್ರಮ ಮುಗಿಸಿ, ‘ಫ್ಯಾಂಟಂ’ ಚಿತ್ರದಲ್ಲಿ ಸುದೀಪ್‌, ಅನೂಪ್‌ ಜತೆಗೆ ತೊಡಗಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

 

Post Comments (+)