ಗುರುವಾರ , ಮಾರ್ಚ್ 4, 2021
18 °C

ಕೃತಿ ಸನೆನ್‌ ವಿರುದ್ಧ ನೆಟ್ಟಿಗರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೀತಾಗಳೊಂದಿಗೆ ತೆಗೆಸಿಕೊಂಡ ಚಿತ್ರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದ ನಟಿ ಕೃತಿ ಸನೆನ್‌ ನೆಟ್ಟಿಗರ ಆಕ್ರೋಶ ಎದುರಿಸಿದ್ದಾರೆ.

ಇತ್ತೀಚೆಗೆ ಸಿನಿಮಾವೊಂದರ ಚಿತ್ರೀಕರಣಕ್ಕೆ ದಕ್ಷಿಣ ಆಫ್ರಿಕಾದ ಜಾಂಬಿಯಾಗೆ ತೆರಳಿದ್ದ ಕೃತಿ ಅಲ್ಲಿನ ರಾಷ್ಟ್ರೀಯ ಪಾರ್ಕ್‌ನಲ್ಲಿ ಚೀತಾಗಳೊಂದಿಗೆ ತೆಗೆಸಿಕೊಂಡ ಹತ್ತಾರು ಚಿತ್ರಗಳನ್ನು ಅಪ್‌ಲೋಡ್‌ ಮಾಡಿದ್ದರು. ಚೀತಾಗಳೊಂದಿಗೆ  ವಾಕ್‌ ಮಾಡಿರುವ ಜೊತೆಗೆ ಅವುಗಳ ಹತ್ತಿರ ನಿಂತು ಪೋಸ್ ಕೂಡ ಕೊಟ್ಟಿದ್ದರು.

ಈ ಚಿತ್ರಗಳು ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಈ ರೀತಿಯ ಚಿತ್ರಗಳಿಗಾಗಿ ಚೀತಾಗಳಿಗೆ ಡ್ರಗ್ಸ್‌ ಕೊಡಲಾಗುತ್ತದೆ. ಅದ್ದರಿಂದಲೇ ಅವು ಮನುಷ್ಯರಿಗೆ ತೊಂದರೆ ಕೊಡದೇ ಸುಮ್ಮನೆ ಚಿತ್ರ ತೆಗೆಯಲು ಬಿಡುತ್ತವೆ. ಪ್ರಾಣಿಗಳಿಗೆ ಹಿಂಸೆ ಕೊಟ್ಟು ಫೋಟೊ ತೆಗೆಸಿಕೊಳ್ಳುವ ಟ್ರೆಂಡ್‌ ಈಗ ಶುರುವಾಗಿದೆ. ಇದನ್ನೆಲ್ಲಾ ಬಿಡಿ’ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

‘ಪ್ರಾಣಿ ಹಿಂಸೆಯಿಂದ ನಿಮಗೇನು ಖುಷಿ ಸಿಗುತ್ತದೆ. ಈ ರೀತಿಯ ಚಿತ್ರಗಳು ನಿಮಗೆ ಸಹಾಯ ಮಾಡುವುದಿಲ್ಲ’ ಎನ್ನುವ ಕಮೆಂಟ್ಸ್‌ಗಳು ಬರತೊಡಗಿದ ಬಳಿಕ ಅವರು ಕೆಲವು ಚಿತ್ರಗಳನ್ನು ಡಿಲೀಟ್ ಮಾಡಿದ್ದಾರೆ.

ಇದಕ್ಕೆ ಕ್ಷಮೆ ಕೂಡ ಕೇಳಿರುವ ಕೃತಿ, ಡ್ರಗ್ಸ್‌ ಕೊಟ್ಟಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಹಾಗೆಯೇ ಅವುಗಳನ್ನು ನಿಯಂತ್ರಿಸುವುದಾಗಿ ಹೇಳಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.