ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ ಶಾಲೆಗೆ ಹಾಜರಾಗಿದ್ದ ಗಾಯಕಿ ಲತಾ ಮಂಗೇಶ್ಕರ್

Last Updated 6 ಫೆಬ್ರುವರಿ 2022, 14:27 IST
ಅಕ್ಷರ ಗಾತ್ರ

ನವದೆಹಲಿ: ಅನೇಕ ಭಾಷೆಗಳಲ್ಲಿ ಹಾಡಿದ್ದ ಲತಾ ಮಂಗೇಶ್ಕರ್ ಅವರು ಶಾಲೆಯಲ್ಲಿ ಕಳೆದದ್ದು ಕೇವಲ ಒಂದೇ ದಿನ!

ಶಾಲೆಯ ಮೊದಲ ದಿನದಂದು ತಮ್ಮ ತಂಗಿ, ಹತ್ತು ತಿಂಗಳ ಕೂಸು ಆಶಾ ಅವರನ್ನು ಎತ್ತಿಕೊಂಡೇ ತೆರಳಿದ್ದ ಲತಾ ಅವರನ್ನು ಕಂಡು ಶಿಕ್ಷಕರು, ಪುಟ್ಟ ಮಕ್ಕಳಿಗೆ ಇಲ್ಲಿ ಪ್ರವೇಶವಿಲ್ಲ ಎಂದು ಗದರಿದ್ದಂತೆ. ಆಗ ಕೋಪಗೊಂಡಿದ್ದ ಲತಾ, ತಂಗಿಯನ್ನು ಎತ್ತಿಕೊಂಡು ತರಗತಿಯಿಂದ ಹೊರ ನಡೆದವರು ಮತ್ತೆ ಶಾಲೆಗೆ ಹಿಂತಿರುಗಲಿಲ್ಲವಂತೆ.

ನಂತರ ಮನೆಯಲ್ಲೇ ಶಿಕ್ಷಣ ಪಡೆದ ಲತಾ ಅವರು, ತಮ್ಮ ಮನೆಯಲ್ಲಿದ್ದ ಕೆಲಸದಾಳು ವಿಠಲ್ ಅವರಿಂದ ಮರಾಠಿಯ ವರ್ಣಮಾಲೆಗಳನ್ನು ಕಲಿತರು. ತಮ್ಮ ಸೋದರ ಸಂಬಂಧಿ ಇಂದಿರಾ ಮತ್ತು ಲೇಖ್ರಾಜ್ ಶರ್ಮಾ ಅವರಿಂದ ಹಿಂದಿ ಭಾಷೆ ಕಲಿತ ಲತಾ ಅವರು ಉರ್ದು, ಬಂಗಾಳಿ ಹಾಗೂ ಅಲ್ಪಮಟ್ಟಿಗೆ ಪಂಜಾಬಿಯನ್ನೂ ಕಲಿತರು. ಸಂಸ್ಕೃತವನ್ನೂ ಅರ್ಥಮಾಡಿಕೊಳ್ಳಬಲ್ಲವರಾಗಿದ್ದರು. ತಮಿಳು ಭಾಷೆಯನ್ನೂ ಕಲಿಯಲು ಪ್ರಯತ್ನಿಸಿದ್ದರು.

‌ಈ ಪ್ರಸಂಗವನ್ನು ಲತಾ ಅವರ ಆತ್ಮಚರಿತ್ರೆ ‘ಲತಾ ಮಂಗೇಶ್ಕರ್... ಅವಳದೇ ದನಿಯಲ್ಲಿ’ ಕೃತಿಯಲ್ಲಿ ಲೇಖಕಿ ನಸ್ರೀನ್ ಮುನ್ನಿ ಕಬೀರ್ ಅವರು ಉಲ್ಲೇಖಿಸಿದ್ದಾರೆ.\

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT