ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ವಸಿಷ್ಠ ಸಿಂಹ ಅಭಿನಯದ ‘Love ಲಿ’ಗೆ ಜೋಡಿಯಾದ ಸ್ಟೆಫಿ ಪಟೇಲ್

Last Updated 18 ಜುಲೈ 2022, 9:28 IST
ಅಕ್ಷರ ಗಾತ್ರ

ತಮ್ಮ ಕಂಚಿನ ಕಂಠ, ನಟನೆಯಿಂದ ಪಾತ್ರಗಳಿಗೆ ಜೀವತುಂಬುತ್ತಿರುವ ನಟ ವಸಿಷ್ಠ ಸಿಂಹ ಅವರ ಹೊಸ ಸಿನಿಮಾ ‘Love ಲಿ’ ತಿಂಗಳ ಹಿಂದಷ್ಟೇ ಸೆಟ್ಟೇರಿತ್ತು. ರೌಡಿಸಂ ಕಥಾಹಂದರದ ಈ ಚಿತ್ರದಲ್ಲಿ, ‘ಚಿಟ್ಟೆ’ ಖ್ಯಾತಿಯ ವಸಿಷ್ಠಅವರಿಗೆ ಜೋಡಿ ಯಾರು ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡಿತ್ತು. ಅದಕ್ಕೆ ಇದೀಗ ಚಿತ್ರತಂಡ ಉತ್ತರಿಸಿದೆ.

ಚಿತ್ರಕ್ಕೆ ನಾಯಕಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ಆಯ್ಕೆಯಾಗಿದ್ದಾರೆ. ಹಿಂದಿ, ತಮಿಳು ಭಾಷೆಗಳ ಸಿನಿಮಾ ಮತ್ತು ವೆಬ್‌ ಸರಣಿಗಳಲ್ಲಿ ನಟಿಸಿರುವ ಸ್ಟೆಫಿ ಅವರಿಗೆ ಇದು ಮೊದಲ ಕನ್ನಡ ಸಿನಿಮಾ.

ಈಗಾಗಲೇ ಸ್ಟೆಫಿ ಪಟೇಲ್ ‘Love ಲಿ’ ಚಿತ್ರತಂಡ ಸೇರಿಕೊಂಡಿದ್ದು ಜುಲೈ 19ರಿಂದ ಚಿತ್ರದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ. ವಸಿಷ್ಠ ಸಿಂಹ ಹಾಗೂ ಸ್ಟೆಫಿ ಕಾಂಬಿನೇಶನ್ ಒಳಗೊಂಡ ವಿಶೇಷ ಪೋಸ್ಟರ್ ಒಂದನ್ನು ಜುಲೈ 21ರಂದು ಚಿತ್ರತಂಡ ಬಿಡುಗಡೆ ಮಾಡಲಿದೆ.

ಕಿರುತೆರೆಯಿಂದ ಬೆಳ್ಳಿತೆರೆಗೆ ಹೆಜ್ಜೆ ಇಟ್ಟಿದ್ದ ನಟಿ ಸಮೀಕ್ಷಾ ಕೂಡಾ ಈ ಚಿತ್ರದಲ್ಲಿ ಪಾತ್ರವೊಂದಕ್ಕೆ ಬಣ್ಣಹಚ್ಚಿದ್ದಾರೆ. ‘ಸುಬ್ಬಲಕ್ಷ್ಮೀ ಸಂಸಾರ’ ಧಾರಾವಾಹಿಯಲ್ಲಿ ಶನಾಯಾ ಪಾತ್ರದಲ್ಲಿ ಮಿಂಚಿದ್ದ ಸಮೀಕ್ಷಾ, ಪ್ರೀತಂ ಗುಬ್ಬಿ ನಿರ್ದೇಶನದ ‘99’ ಸಿನಿಮಾದಲ್ಲಿ ನಾಯಕಿಯ ಬಾಲ್ಯದ ಪಾತ್ರದಲ್ಲಿ ನಟಿಸಿದ್ದರು.

‘Love...ಲಿ’ ಪ್ರೇಮಕಥೆಯಾಗಿದ್ದು, ಜೊತೆಗೆ ರೌಡಿಸಂನ ವಿಭಿನ್ನ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ. ‘ಮಫ್ತಿ’ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರವನ್ನು ಎಂ.ಆರ್ ರವೀಂದ್ರ ಕುಮಾರ್ ನಿರ್ಮಿಸುತ್ತಿದ್ದು, ಹರೀಶ್ ಕೊಮ್ಮೆ ಸಂಕಲನ, ಅಶ್ವಿನ್ ಕೆನಡಿ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT