ಮಹೇಶ್ ಗೌಡ ನಿರ್ದೇಶನದ ‘ಮಹಿರ’ ಚಿತ್ರ ಗೆಲುವು ಸಾಧಿಸಿದೆಯಂತೆ. ಈ ಬಗ್ಗೆ ಮಾಹಿತಿ ನೀಡಲು ಸುದ್ದಿಗಾರರನ್ನು ಆಹ್ವಾನಿಸಿದ್ದ ಮಹೇಶ್, ‘ನಮ್ಮ ಚಿತ್ರವು ವಿಮರ್ಶಕರಿಂದ ಈಗಾಗಲೇ ಒಳ್ಳೆಯ ಹೆಸರು ಸಂಪಾದಿಸಿದೆ. ವಾರಾಂತ್ಯಗಳಲ್ಲಿ ವೀಕ್ಷಕರು ಕೂಡ ಒಳ್ಳೆಯ ಪ್ರತಿಕ್ರಿಯೆ ತೋರಿಸಿದ್ದಾರೆ. ಚಿತ್ರವು ಹೌಸ್ಫುಲ್ ಆಗಿ ಪ್ರದರ್ಶನ ಕಂಡಿದೆ’ ಎಂದು ಖುಷಿ ಹಂಚಿಕೊಂಡರು.

ಕನ್ನಡ ಸಿನಿಮಾ ಲೋಕಕ್ಕೆ ಹೊಸಬರಾದ ವರ್ಜಿನಿಯಾ ರಾಡ್ರಿಗಸ್ ಮತ್ತು ಚೈತ್ರಾ ಆಚಾರ್ ಅವರ ಅಭಿನಯಕ್ಕೆ ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆಯಂತೆ. ಸಿನಿಮಾಕ್ಕೆ ಒಳ್ಳೆಯ ಸ್ಪಂದನೆ ದೊರೆತ ಖುಷಿಯಲ್ಲಿದ್ದ ಮಹೇಶ್ ಇನ್ನೂ ಒಂದು ಸುದ್ದಿ ನೀಡಿದರು. ‘ನಾನು ಹೊಸ ಸಿನಿಮಾ ಮಾಡುತ್ತಿದ್ದೇನೆ. ಚಿತ್ರಕಥೆ ಸಿದ್ಧವಾಗಿದ್ದು ತಾರಾಗಣ ಹೇಗಿರುತ್ತದೆ ಎಂಬುದು ಅಂತಿಮಗೊಂಡಿಲ್ಲ’ ಎಂದರು ಮಹೇಶ್.

‘ಮಹಿರ’ ಚಿತ್ರದ ಡಿಜಿಟಲ್ ಹಾಗೂ ಟಿ.ವಿ. ಹಕ್ಕುಗಳ ಮಾರಾಟದ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದೂ ಅವರು ತಿಳಿಸಿದರು. ‘ಮಹಿರ ಚಿತ್ರಕ್ಕೆ ಪ್ರತಿದಿನ ಒಳ್ಳೆಯ ವಿಮರ್ಶೆಗಳು ಬರುತ್ತಿವೆ. ಬುಕ್ಮೈಶೋ ಹಾಗೂ ಫೇಸ್ಬುಕ್ನಲ್ಲಿ ಜನ ಒಳ್ಳೆಯ ಮಾತು ಹೇಳುತ್ತಿದ್ದಾರೆ. ಜನರೇ ಈ ಚಿತ್ರಕ್ಕೆ ಈಗ ಪ್ರಚಾರ ಕೊಡುತ್ತಿದ್ದಾರೆ’ ಎಂದು ಚಿತ್ರತಂಡ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.