ತಿರುವನಂತಪುರ: ಮಲಯಾಳಂನ ಖ್ಯಾತ ನಟಿ ಆರ್. ಸುಬ್ಬಲಕ್ಷ್ಮಿ (87) ಅವರು ನಿಧನರಾದರು. ಗುರುವಾರ ರಾತ್ರಿ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.

ಸುಬ್ಬಲಕ್ಷ್ಮಿ ಅವರು, ಕರ್ನಾಟಿಕ್ ಸಂಗೀತಗಾರ್ತಿ ಮತ್ತು ವರ್ಣಚಿತ್ರಕಾರರೂ ಆಗಿದ್ದಾರೆ. ಮಲಯಾಳಂ ಸಿನಿಮಾದಲ್ಲಿ ವಿಶಿಷ್ಟ ಪೋಷಕ ನಟಿಯರಲ್ಲಿ ಒಬ್ಬರಾಗಿದ್ದರು, ನಾಜೂಕು ಮತ್ತು ನಟನಾ ಕೌಶಲ್ಯದಿಂದ ಅಜ್ಜಿಯ ಪಾತ್ರಗಳನ್ನು ಮನಮುಟ್ಟುವಂತೆ ನಿರ್ವಹಿಸುತ್ತಿದ್ದರು.

ಕಲ್ಯಾಣರಾಮನ್ (2002), ಪಾಂಡಿಪ್ಪಡ (2005), ನಂದನಂ (2002) ತಿಳಕ್ಕಂ, ಸಿಐಡಿ ಸೇರಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿ ಛಾಪು ಮೂಡಿಸಿದ್ದರು.

ಸುಬ್ಬಲಕ್ಷ್ಮಿ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಮಲಯಾಳಂ ಚಿತ್ರನಟ ದಿಲೀಪ್ ಸೇರಿದಂತೆ ಹಲವು ನಟ, ನಟಿಯರು ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.