ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Max Film Update: ಶೂಟಿಂಗ್‌ ಜೊತೆಜೊತೆಗೇ ಡಬ್ಬಿಂಗ್‌

Published 16 ಜನವರಿ 2024, 11:30 IST
Last Updated 16 ಜನವರಿ 2024, 11:30 IST
ಅಕ್ಷರ ಗಾತ್ರ

ಕಿಚ್ಚ ಸುದೀಪ್‌ ನಟನೆಯ 46ನೇ ಸಿನಿಮಾ ‘ಮ್ಯಾಕ್ಸ್‌’ನ ಕ್ಲೈಮ್ಯಾಕ್ಸ್‌ ಶೂಟಿಂಗ್‌ ಸಂಕ್ರಾಂತಿ ಬಳಿಕ ಪುನರಾರಂಭಗೊಂಡಿದೆ. ಚಿತ್ರೀಕರಣದ ಕುರಿತು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಸುದೀಪ್‌ ಅಪ್‌ಡೇಟ್‌ ನೀಡಿದ್ದಾರೆ. ‌

ವಿಜಯ್‌ ಕಾರ್ತಿಕೇಯ ಆ್ಯಕ್ಷನ್‌, ಕಟ್‌ ಹೇಳಿರುವ ಈ ಸಿನಿಮಾದ ಚಿತ್ರೀಕರಣ ತಮಿಳುನಾಡಿನ ಮಹಾಬಲಿಪುರಂನಲ್ಲಿ ಹಾಕಿರುವ ಸೆಟ್‌ನಲ್ಲಿ ನಡೆಯುತ್ತಿದೆ. ಸಂಕ್ರಾಂತಿ ಹಬ್ಬ ಆಚರಿಸಿ ಮಂಗಳವಾರ(ಜ.16) ಬೆಳಿಗ್ಗೆ ಚೆನ್ನೈಗೆ ಪ್ರಯಾಣ ಬೆಳೆಸಿರುವ ಸುದೀಪ್‌, ಅಭಿಮಾನಿಗಳ ಜೊತೆ ‘ಎಕ್ಸ್‌’ನಲ್ಲಿ ಮಾತುಕತೆ ನಡೆಸಿದ್ದಾರೆ. ‘ಮ್ಯಾಕ್ಸ್‌ ಸಿನಿಮಾದ ಕ್ಲೈಮ್ಯಾಕ್ಸ್‌ ಭಾಗದ ಚಿತ್ರೀಕರಣ ಪುನರಾರಂಭವಾಗುತ್ತಿದ್ದು, ಇದರಲ್ಲಿ ಭಾಗವಹಿಸಲು ತೆರಳುತ್ತಿದ್ದೇನೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿರುವ ಭಾಗದ ಡಬ್ಬಿಂಗ್‌ ಅನ್ನು ಎಲ್ಲ ಕಲಾವಿದರು ಪೂರ್ಣಗೊಳಿಸಿದ್ದಾರೆ. ಉಳಿದ ಭಾಗದ ಚಿತ್ರೀಕರಣ ನಡೆಯುತ್ತಿದೆ’ ಎಂದಿರುವ ಸುದೀಪ್‌, ಸಿನಿಮಾದ ಶೂಟಿಂಗ್‌ ಜೊತೆಜೊತೆಗೇ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಆರಂಭವಾಗಿರುವುದರ ಸುಳಿವು ನೀಡಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ ಎಂದಿದ್ದಾರೆ.  

‘ನವೆಂಬರ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆಲ ವಾರ ಚಿತ್ರೀಕರಣ ಸಾಧ್ಯವಾಗಲಿಲ್ಲ. ಇದೀಗ ಚಿತ್ರೀಕರಣ ಯಾವುದೇ ಅಡ್ಡಿಯಿಲ್ಲದೆ ಸಾಗುತ್ತಿದೆ. ಸಿನಿಮಾದ ಚಿತ್ರೀಕರಣವೇ ಪೂರ್ಣವಾಗದೇ ಇರುವಾಗ ಏನೆಂದು ಅಪ್‌ಡೇಟ್‌ಗಳನ್ನು ನೀಡಲಿ’ ಎಂದು ಅಭಿಮಾನಿಗಳನ್ನು ಕಿಚ್ಚ ಪ್ರಶ್ನಿಸಿದ್ದಾರೆ. 

2024ಕ್ಕೆ ‘BRB’: ‘ವಿಕ್ರಾಂತ್‌ ರೋಣ’ ಸಿನಿಮಾದ ಬಳಿಕ ನಿರ್ದೇಶಕ ಅನೂಪ್‌ ಭಂಡಾರಿ ಜೊತೆಗೆ ಮತ್ತೊಂದು ಸಿನಿಮಾ ಮಾಡಲು ಸುದೀಪ್‌ ಸಜ್ಜಾಗಿದ್ದಾರೆ. ಇದೇ ವರ್ಷದಲ್ಲಿ ‘ಬಿಲ್ಲಾ ರಂಗ ಬಾಷಾ’(BRB) ಸೆಟ್ಟೇರಲಿದೆ ಎಂದು ಸುದೀಪ್‌ ತಿಳಿಸಿದ್ದಾರೆ.  

ಮ್ಯಾಕ್ಸ್‌ ಚಿತ್ರದ ಪೋಸ್ಟರ್

ಮ್ಯಾಕ್ಸ್‌ ಚಿತ್ರದ ಪೋಸ್ಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT