ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಯಾವಿ’ ಡಬ್ಬಿಂಗ್‌ ಮುಕ್ತಾಯ

Last Updated 17 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ನಟ ಸಂಚಾರಿ ವಿಜಯ್‌ ನಟನೆಯ ‘ಮೇಲೊಬ್ಬ ಮಾಯಾವಿ’ ಚಿತ್ರದ ಡಬ್ಬಿಂಗ್ ಪೂರ್ಣಗೊಂಡಿದೆ. ಚಿತ್ರವು ವಿಭಿನ್ನ ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿದೆ. ಪತ್ರಕರ್ತ ಬಿ.ನವೀನ್‍ಕೃಷ್ಣ ಮೊದಲ ಬಾರಿಗೆ ನಿರ್ದೇಶಕನ ಟೋಪಿ ಧರಿಸಿದ್ದು, ಚಕ್ರವರ್ತಿ ಚಂದ್ರಚೂಡ್‌ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ. ಪುತ್ತೂರು ಭರತ್ ಮತ್ತು ತನ್ವಿ ಅಮಿನ್ ಕೊಲ್ಯ ಚಿತ್ರಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ.

‘ಇರುವೆ ಹೆಸರಿನ ನನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡುವುದು ನಿಜಕ್ಕೂ ಸವಾಲಾಗಿತ್ತು. ನನ್ನ ವೃತ್ತಿಬದುಕಿನಲ್ಲಿ ಇಲ್ಲಿಯವರೆಗೂ ಇಂತಹ ಪಾತ್ರ ಮಾಡಿಲ್ಲ. ನಟನಿಗೆ ಇಂತಹ ಪಾತ್ರ ಸಿಗುವುದೇ ಅಪರೂಪ. ನಿರ್ದೇಶಕರು ಈ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಸಂಚಾರಿ ವಿಜಯ್‌ ಪ್ರತಿಕ್ರಿಯಿಸಿದ್ದಾರೆ.

‘ನನ್ನ ಇರುವೆ ಪಾತ್ರಕ್ಕೆ ಡಬ್ಬಿಂಗ್‌ ಮಾಡುವುದು ಯಾಕೆ ಸಾಕಷ್ಟು ಚಾಲೆಂಜ್ ಅಂದ್ರೆ, ಆ ಪಾತ್ರಕ್ಕೆ ಯಾವುದೇ ರೆಫೆರೆನ್ಸ್ ಇಲ್ಲ. ಉದಾಹರಣೆಗೆ ಮಂಗಳಮುಖಿ, ಡಾಕ್ಟರ್, ಹುಚ್ಚ ಇಂತಹ ಪಾತ್ರ ಮಾಡುವುದಕ್ಕೆ ಅವರ ಬದುಕನ್ನು ಅಧ್ಯಯನ ಮಾಡಲು ಅವಕಾಶವಿರುತ್ತದೆ. ಇಲ್ಲಿ ಅದಕ್ಕೆ ಅವಕಾಶವೇ ಇಲ್ಲ. ಪಾತ್ರದ ಧ್ವನಿ ಕೂಡ ವಿಭಿನ್ನವಾಗಿರಬೇಕು. ಇದೊಂದು ಅಪರೂಪದ ಕಥೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT