ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಆರ್‌.ಎಫ್‌ ಕಿರುಚಿತ್ರ: ಕನ್ನಡಿಯಲ್ಲಿ ನಾಳೆಯ ಭವಿಷ್ಯ!

Published : 5 ಆಗಸ್ಟ್ 2021, 19:30 IST
ಫಾಲೋ ಮಾಡಿ
Comments

ನಾಳಿನ ಭವಿಷ್ಯವನ್ನು ಇಂದೇ ತಿಳಿದರೆ ಇಂದಿನ ಕ್ಷಣವನ್ನು ಅನುಭವಿಸಲಾಗುವುದಿಲ್ಲ ಎನ್ನುವ ಸಾರಾಂಶವನ್ನು ಇಟ್ಟುಕೊಂಡು ಹೊಸಬರ ತಂಡವೊಂದು ‘ಎಂ.ಆರ್‌.ಎಫ್‌’ ಕಿರುಚಿತ್ರವೊಂದನ್ನು ಬಿಡುಗಡೆ ಮಾಡಿದೆ.

ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಚಿತ್ರವು ಬಿಡುಗಡೆಯಾಗಿದ್ದು, ನಮ್ಮ ಜೀವನದಲ್ಲಿ ನಾಳೆ ನಡೆಯುವ ಘಟನೆಗಳು ಇಂದೇ ತಿಳಿದರೆ ನಮ್ಮ ಪರಿಸ್ಥಿತಿ ಹೇಗಿರುವುದು ಮತ್ತು ಅದನ್ನು ತಿಳಿಯುವುದು ಒಳ್ಳೆಯದೇ, ಕೆಟ್ಟದೇ ಎನ್ನುವ ವಿಷಯವನ್ನು ಇರಿಸಿಕೊಂಡು ಯುವ ನಿರ್ದೇಶಕ ಕ್ರಿತ್ವಿಕ್ ಅಚ್ಚುಕಟ್ಟಾಗಿ ಕಥೆ ಹೆಣೆದಿದ್ದಾರೆ. ನಾಯಕನ ಪಾತ್ರದಲ್ಲಿ ಮುಕುಂದ ರಾಮಸ್ವಾಮಿ ನಟಿಸಿದ್ದು ಅವರೇ ಈ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ಫ್ರೆಂಚ್ ಬಿರಿಯಾನಿ’ ಸಿನಿಮಾ ಖ್ಯಾತಿಯ ಮಾಂತೇಶ್ ಅವರೂ ಇದರಲ್ಲಿ ವಿಭಿನ್ನವಾದ ಪಾತ್ರ ನಿರ್ವಹಿಸಿದ್ದಾರೆ. ಆಶಿಕ್ ಅವರ ಛಾಯಾಗ್ರಹಣ, ವಿಜಯ್ ಅವರ ಸಂಕಲನ ಚಿತ್ರಕ್ಕಿದೆ. ವಿನು ಈ ಕಿರುಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT