‘ನನ್ನ ಪ್ರಕಾರ’ ಫಸ್ಟ್‌ ಲುಕ್ ಬಿಡುಗಡೆ

7

‘ನನ್ನ ಪ್ರಕಾರ’ ಫಸ್ಟ್‌ ಲುಕ್ ಬಿಡುಗಡೆ

Published:
Updated:

ಜಿ.ವಿ.ಕೆ. ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಗುರುರಾಜ್ ಎಸ್. ಅವರು ನಿರ್ಮಾಣ ಮಾಡುತ್ತಿರುವ `ನನ್ನ ಪ್ರಕಾರ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ತುಮಕೂರು, ದೇವರಾಯನದುರ್ಗ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಲಿದೆ. ಜನವರಿ 4ರಂದು ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದೆ.  ನಿರ್ದೇಶಕ ಬಹದ್ದೂರ್ ಚೇತನ್ ಕುಮಾರ್ ಚಿತ್ರದ ಫಸ್ಟ್‌ ಲುಕ್ ಬಿಡುಗಡೆ ಮಾಡಲಿದ್ದಾರೆ. ಫೆಬ್ರುವರಿಯಲ್ಲಿ ಚಿತ್ರದ ಹಾಡುಗಳು ಬಿಡುಗಡೆಯಾಗಲಿದೆ.

ವಿನಯ್ ಬಾಲಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಅರ್ಜುನ್‍ರಾಮು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮನ್ವರ್ಷಿ, ವಿನಯ್‍ ಬಾಲಾಜಿ ಸಂಭಾಷಣೆ ಬರೆದಿದ್ದಾರೆ. ಮನೋಹರ ಜೋಷಿ ಛಾಯಾಗ್ರಹಣವಿದೆ. ಈ ಚಿತ್ರದ ಹಾಡುಗಳನ್ನು ಕವಿರಾಜ್, ಬಹದ್ದೂರ್ ಚೇತನ್, ಕಿರಣ್ ಕಾವೇರಪ್ಪ ಬರೆದಿದ್ದಾರೆ. ಕಿಶೋರ್, ಪ್ರಿಯಾಮಣಿ, ಮಯೂರಿ, ಅರ್ಜುನ್ ಯೋಗಿ, ನಿರಂಜನ್ ದೇಶಪಾಂಡೆ, ಗಿರಿಜಾ ಲೋಕೇಶ್, ವೈಷ್ಣವಿ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ⇒v

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !