ನವದೆಹಲಿ: 2024ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಕನ್ನಡದ ಕೆಜಿಎಫ್ ಚಾಪ್ಟರ್–2 ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದಲ್ಲದೆ ಈ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶನ ಹಾಗೂ ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ ದೊರೆತಿದೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್–2 ಸಿನಿಮಾ 2022ರಲ್ಲಿ ಬಿಡುಗಡೆಯಾಗಿತ್ತು. 2022ರಲ್ಲಿ ಈ ಚಿತ್ರ ಐಎಂಡಿಬಿಯಲ್ಲಿಯೂ 8.5 ರೇಟಿಂಗ್ ಪಡೆದುಕೊಂಡಿತ್ತು.
ಚಂದನವನದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಕಾಂತಾರ ಚಿತ್ರಕ್ಕೆ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.
ಮಣ್ಣಿನ ಘಮಲಲ್ಲಿ ಸಂಘರ್ಷ–ಸೌಹಾರ್ದವನ್ನು ಸಾರಿದ ಕಾಂತಾರ ಚಿತ್ರ ಕನ್ನಡಿಗರಿಗೆ ಸಂಸ್ಕೃತಿಯ ಹೊಸ ಲೋಕವೊಂದು ಕಾಣುವಂತೆ ಮಾಡಿತ್ತು.