ಈ ವಾರ ತೆರೆಗೆ ಬರಲು ಸಜ್ಜಾಗಿರುವ ಸಿನಿಮಾಗಳು

7

ಈ ವಾರ ತೆರೆಗೆ ಬರಲು ಸಜ್ಜಾಗಿರುವ ಸಿನಿಮಾಗಳು

Published:
Updated:
Deccan Herald

A+

ಬಿ.ಆರ್. ಸಿನಿಮಾಸ್ ಲಾಂಛನದಲ್ಲಿ ಪ್ರಭುಕುಮಾರ್ ನಿರ್ಮಿಸಿರುವ ಚಿತ್ರವಿದು. ವಿಜಯ್ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಆರ್.ಎಸ್. ಗಣೇಶ್ ನಾರಾಯಣನ್ ಸಂಗೀತ ನೀಡಿದ್ದಾರೆ. ಭೂಪೇಂದರ್ ಸಿಂಗ್ ರೈ ಛಾಯಾಗ್ರಹಣವಿದೆ. ತಾರಾಬಳಗದಲ್ಲಿ ಸಿದ್ದು, ಸಂಗೀತಾ, ಮಧುಸೂದನ್, ಲಕ್ಷ್ಮಿ ಹೆಗಡೆ, ಕೃಷ್ಣಮೂರ್ತಿ ನಾಡಿಗ್, ಪ್ರಶಾಂತ್ ಸಿದ್ದಿ, ಆಶಾ ರಾಣಿ, ನಾಗರಾಜ್, ಮುರಳಿ ಮೋಹನ್ ಇದ್ದಾರೆ.

ಆದಿ ಪುರಾಣ

ಮೋಹನ್ ಕಾಮಾಕ್ಷಿ ಆ್ಯಕ್ಷನ್ ಕಟ್ ಹೇಳಿರುವ ಚಿತ್ರವಿದು. ಶಮಂತ್ ನಿರ್ಮಾಣ ಮಾಡಿದ್ದಾರೆ. ಶಶಾಂಕ್, ಅಹಲ್ಯಾ ಸುರೇಶ್ ಹಾಗೂ ಮೋಕ್ಷಾ ಕುಶಾಲ್ ಮುಖ್ಯಭೂಮಿಕೆಯಲ್ಲಿದ್ದಾರೆ. ಎಂ. ಜಿ. ಗುರುಪ್ರಸಾದ್ ಛಾಯಾಗ್ರಹಣವಿದೆ. ವಿಕ್ರಮ್ ವಸಿಷ್ಠ, ಚಂದನ ವಸಿಷ್ಠ ಹಾಗೂ ಸಿದ್ಧಾರ್ಥ್ ಕಾಮತ್ ಸಂಗೀತ ನೀಡಿದ್ದಾರೆ. ಕವಿರಾಜ್ ಹಾಗೂ ವಿಕ್ರಮ್ ವಸಿಷ್ಠ ಗೀತ ಸಾಹಿತ್ಯ ಬರೆದಿದ್ದಾರೆ. 

ರಂಗಾಯಣ ರಘು, ನಾಗೇಂದ್ರ ಶಾ, ಕರಿ ಸುಬ್ಬು, ವತ್ಸಲಾ ಮೋಹನ್, ಶಕ್ತಿ ವೇಲ್, ಸಮೀರ, ಆದಿತ್ಯ ಭಾರದ್ವಾಜ್, ಜಿಮ್ ಶಿವು, ರಾಧಾ ತಾರಾಗಣದಲ್ಲಿದ್ದಾರೆ. 

ಸ್ನೇಹವೇ ಪ್ರೀತಿ

ಆಂಧ್ರಪ್ರದೇಶದ ಮುಳ್ಳುಗುರು ಅನಂತ ರಾಮುಡು ನಿರ್ಮಾಣ ಮಾಡಿದ ಈ ಚಿತ್ರಕ್ಕೆ ಜಿಎಲ್‌ಬಿ ಶ್ರೀನಿವಾಸ್ ಆ್ಯಕ್ಷನ್‌ ಕಟ್ ಹೇಳಿದ್ದಾರೆ.

ಚಂದ್ರು ಅವರ ಗೀತ ಸಾಹಿತ್ಯಕ್ಕೆ ಬೇಲೂರು ಘಟಿಕಾಚಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಕಥಾ ನಾಯಕ ಸೂರಜ್ ಗೌಡ. ಸೋನಿಯಾ ಹಾಗೂ ಫರ‍್ಹಾ ನಾಯಕಿಯರು. ರವೀಂದ್ರ ತೇಜ, ಓಂ ಸಾಯಿ ಪ್ರಕಾಶ್‌, ಸಾಧು ಕೋಕಿಲ, ರಮೇಶ್ ಭಟ್, ಚಿತ್ರಾ ಶೆಣೈ, ಧನರಾಜ್ ತಾರಾಗಣದಲ್ಲಿದ್ದಾರೆ. ಶಶಿಕಿರಣ್ ಸಂಭಾಷಣೆ ಬರೆದಿದ್ದಾರೆ. 

ನಡುವೆ ಅಂತರವಿರಲಿ

ರವೀನ್- ಜಿ.ಕೆ. ನಾಗರಾಜು ನಿರ್ಮಿಸಿರುವ ಚಿತ್ರ ಇದು. ಚಿತ್ರದ ಚಿತ್ರಕಥೆ- ನಿರ್ದೇಶನ ರವೀನ್ ಅವರದು. ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ. ಯೋಗಿ ಅವರ ಛಾಯಾಗ್ರಹಣವಿದೆ. ಕದ್ರಿ ಮಣಿಕಾಂತ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಗೌಸ್‌ಪೀರ್ ಹಾಡುಗಳನ್ನು ಬರೆದಿದ್ದಾರೆ. ತಾರಾಗಣದಲ್ಲಿ ಪ್ರಖ್ಯಾತ್ ಪರಮೇಶ್, ಐಶಾನಿ ಶೆಟ್ಟಿ, ಚಿಕ್ಕಣ್ಣ, ರಕ್ಷಿತ್ ಕುಮಾರ್, ತುಳಸಿ ಶಿವಮಣಿ, ಅರುಣಾ ಬಾಲರಾಜ್, ಶ್ರೀನಿವಾಸ ಪ್ರಭು, ಮಂಜು ಮಾಂಡವ್ಯ ಇದ್ದಾರೆ.

ಖೊಟ್ಟಿ ಪೈಸೆ

ಜ್ಯೋತಿ ಫಿಲಂಸ್ ಲಾಂಛನದಲ್ಲಿ ವೀರಪ್ಪ.ವಿ. ಶಿರಗಣ್ಣನವರ್, ಗಿರಿಜಾ ಕುಮಾರ್ ನಿರ್ಮಿಸಿರುವ ಚಿತ್ರವಿದು. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಕಿರಣ್ ಆರ್.ಕೆ. ಸಂಗೀತ ಸಂಯೋಜನೆಯ ಹೊಣೆಯನ್ನು ರವಿ ತೇಜ ಹೊತ್ತಿದ್ದಾರೆ. ಸದಾಶಿವ ಹಿರೇಮಠ್ ಛಾಯಾಗ್ರಹಣವಿದೆ. ವೈಜನಾಥ್‍ ಬಿರಾದಾರ್, ರಾಮಚೇತನ್, ಸಹನಾ, ರಂಜಿತ್, ಕಿರಣ್, ಮೋಹನ್ ಕುಮಾರ್, ಗೋಪಿ, ಮಂಜುನಾಥ್ ಪಾಟೀಲ್, ಬೇಬಿ ಸ್ವಪ್ನಾ, ವಸಂತ ಲಕ್ಷ್ಮಿ, ಗೀತಾ ತಾರಾಗಣದಲ್ಲಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !