ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್‌ ನಿಶ್ಚಿತಾರ್ಥ!

Last Updated 27 ಜುಲೈ 2018, 13:23 IST
ಅಕ್ಷರ ಗಾತ್ರ

ಮುಂಬೈ: ಗ್ಲೋಬಲ್ ಸ್ಟಾರ್‌ ಎಂದೇ ಖ್ಯಾತಿಯಾಗಿರುವ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ, ತನ್ನ ಬಹುಕಾಲದ ಗೆಳೆಯ ಹಾಗೂ ಅಮೆರಿಕದ ಗಾಯಕ ನಿಕ್ ಜೋನಾಸ್‌ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕ, ಕಳೆದ ವಾರ ನ್ಯೂಯಾರ್ಕ್‌ನಲ್ಲಿ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಳೆದೆರಡು ತಿಂಗಳಿಂದ ನಿಕ್‌ ಜೊತೆ ಡೇಟಿಂಗ್‌ ಮಾಡುತ್ತಿದ್ದ ಪ್ರಿಯಾಂಕ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ ಎಂದುಪೀಪಲ್‌ ಸುದ್ದಿ ತಾಣ ವರದಿ ಮಾಡಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಸಲ್ಮಾನ್‌ ಖಾನ್‌ ಅಭಿನಯಿಸುತ್ತಿರುವ ‘ಭಾರತ್‌’ ಸಿನಿಮಾದ ನಿರ್ದೇಶಕ ಅಲಿ ಅಬ್ಬಾಸ್‌ ಜಫರ್‌ ಪ್ರಿಯಾಂಕ ಚಿತ್ರ ತಂಡದಿಂದ ಹೊರ ಬಿದ್ದಿರುವುದಾಗಿ ಹೇಳಿದ್ದಾರೆ. ಪ್ರಿಯಾಂಕ ಭಾರತ್‌ ಸಿನಿಮಾದಲ್ಲಿ ನಟಿಸುತ್ತಿಲ್ಲ, ಇದಕ್ಕೆ ವಿಶೇಷವಾದ ಕಾರಣವಿದೆ, ಅವರು ನಿಕ್‌ ಜೊತೆ ಕಾಲ ಕಳೆಯಲಿದ್ದಾರೆ, ಇದು ನಮಗೆ ಸಂತಸ ತಂದಿದೆ ಎಂದುಅಬ್ಬಾಸ್‌ ಜಫರ್‌ ಟ್ವೀಟ್‌ ಮಾಡಿದ್ದಾರೆ.

ಕಳೆದೊಂದು ತಿಂಗಳಿಂದಪ್ರಿಯಾಂಕಾ ಮತ್ತು ನಿಕ್‌ ಸುತ್ತಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಪ್ರಿಯಾಂಕಾ ಅವರ 36ನೇ ಹುಟ್ಟುಹಬ್ಬದ ದಿನವೇ ನಿಕ್‌ ಜೋನಾಸ್‌ ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ್ದರಂತೆ! ಅಂದೇ ನಿಶ್ಚಿತಾರ್ಥವೂ ನಡೆದಿದೆ ಎಂದುಪೀಪಲ್ ಸುದ್ದಿ ತಾಣ ವರದಿ ಮಾಡಿದೆ.

ಇವರಿಬ್ಬರಿಗೂ ವಯಸ್ಸಿನಲ್ಲಿ 10 ವರ್ಷಗಳ ಅಂತರವಿದೆ. ಪ್ರಿಯಾಂಕಾಗೆ 36 ವರ್ಷ ವಯಸ್ಸಾಗಿದ್ದರೆ, ನಿಕ್ ಜೋನಾಸ್‌ಗೆ 25 ವರ್ಷ.

ಇನ್ನೊಂದು ವರ್ಷದಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ ಎನ್ನಲಾಗಿದೆ. ಆದಾಗ್ಯೂ ನಿಶ್ಚಿತಾರ್ಥ ನಡೆದಿರುವ ಬಗ್ಗೆ ಪ್ರಿಯಾಂಕ ಅಥವಾ ನಿಕ್ ಜೋನಾಸ್‌ ಅಧಿಕೃತವಾಗಿ ಪ್ರಕಟಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT