ಗುರುವಾರ , ಏಪ್ರಿಲ್ 9, 2020
19 °C

ನಿರ್ಭಯಾ ಹಂತಕರ ಹ್ಯಾಂಗ್‌ಮ್ಯಾನ್‌ಗೆ ₹1 ಲಕ್ಷ ದೇಣಿಗೆ ನೀಡಿದ ನಟ ಜಗ್ಗೇಶ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿರುವ ಪವನ್ ಜಲ್ಲಾದ್ ಅವರಿಗೆ ₹ 1 ಲಕ್ಷ ದೇಣಿಗೆ ನೀಡುವುದಾಗಿ ಹೇಳಿದ್ದ ನಟ ಜಗ್ಗೇಶ್‌ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. 

ದೇಣಿಗೆ ನೀಡುವ ಕುರಿತು ಟ್ವೀಟ್‌ ಮಾಡಿರುವ ಜಗ್ಗೇಶ್‌, ‘ಕೊಟ್ಟ ಮಾತಿನಂತೆ ನಿರ್ಭಯಾ ಹಂತಕರ ಹ್ಯಾಂಗ್‌ಮ್ಯಾನ್‌ಗೆ ₹1 ಲಕ್ಷ ದೇಣಿಗೆ ನೀಡುತ್ತಿದ್ದೇನೆ. ದೇವರು ಎಲ್ಲವನ್ನು ನೋಡುತ್ತಿರುತ್ತಾನೆ. ಸತ್ಯದ ಹಾದಿಯಲ್ಲಿ ನಡೆದವನಿಗೆ ಭಯವಿಲ್ಲ, ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪಿದಲ್ಲ. ಈ ದಿನಕ್ಕೆ ಹಲ್ಲುಕಚ್ಚಿ ಕಾಯುತ್ತ ದುಷ್ಟ ಕ್ರಿಮಿಗಳಿಗೆ ಎಂದು ಕಾಯುತ್ತಿದ್ದೆ. ಸುದ್ದಿ ಕೇಳು ನಿದ್ರೆ ಮಾಡದೆ ಕಾದೆ’ ಎಂದು ಬರೆದುಕೊಂಡಿದ್ದಾರೆ. 

2012 ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಇಂದು ಬೆಳಿಗ್ಗೆ (ಮಾರ್ಚ್‌ 20) ಗಲ್ಲಿಗೇರಿಸಲಾಯಿತು. 

ಇನ್ನಷ್ಟು... 

ನಿರ್ಭಯಾ ಅತ್ಯಾಚಾರಿಗಳು ಗಲ್ಲಿಗೇರಿದ ಕೊನೆಯ ಕ್ಷಣಗಳು...

ಕೊನೆಗೂ ತೆರೆ ಕಂಡಿತು ನಿರ್ಭಯಾ ಪ್ರಕರಣ: ಏನಂದರು ಗಣ್ಯರು? 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)