ಕೊಚ್ಚಿ: ಮಲಯಾಳ ನಟ ನಿವಿನ್ ಪೌಳಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, 40 ವರ್ಷದ ಮಹಿಳೆ ನೀಡಿದ ದೂರಿನನ್ವಯ ಅವರ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದೆ.
‘ವರ್ಷದ ಹಿಂದೆ ದುಬೈನಲ್ಲಿ ನಿವಿನ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ’ ಎಂದು ಮಹಿಳೆ ದೂರಿದ್ದಾರೆ.
‘ಮಹಿಳೆ ನೀಡಿದ ದೂರು ಆಧರಿಸಿ ನಟ ನಿವಿನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ, ಮಹಿಳೆ ಸೇರಿದಂತೆ ಆರು ಜನ ಆರೋಪಿಗಳಿದ್ದಾರೆ. ಮಹಿಳೆ ಮೊದಲ ಆರೋಪಿಯಾಗಿದ್ದರೆ, ನಿವಿನ್ ಆರನೇ ಆರೋಪಿ’ ಎಂದು ಪೊಲೀಸರು ತಿಳಿಸಿದ್ದಾರೆ.