ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಸಿನಿಮಾ ಹಬ್ಬ: ಚಿತ್ರಮಂದಿರಗಳು ಹೌಸ್‌ಫುಲ್‌!

Last Updated 10 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಕನ್ನಡ ಸಿನಿ ಪ್ರೇಕ್ಷಕರಿಗೆ ಮತ್ತೆ ಸಿನಿಮಾ ಹಬ್ಬ ಆರಂಭವಾಗಿದೆ. ಚಿತ್ರಮಂದಿರಗಳು ಪ್ರೇಕ್ಷಕರಿಂದಹೌಸ್‌ಫುಲ್‌ ಆಗುತ್ತಿವೆಯೋ ಇಲ್ಲವೋ ತಿಳಿದಿಲ್ಲ. ಆದರೆ ಇನ್ನು ಪ್ರತಿ ಶುಕ್ರವಾರ ಚಿತ್ರಮಂದಿರಗಳಂತೂ ಸಿನಿಮಾಗಳಿಂದ ತುಂಬಿಕೊಳ್ಳಲಿದೆ. ಇಂದು (ಫೆ.11) ಆರು ಸಿನಿಮಾಗಳು ತೆರೆ ಕಾಣುತ್ತಿವೆ.

ಈ ಪೈಕಿಡಾರ್ಲಿಂಗ್‌ ಕೃಷ್ಣ, ರಾಚೆಲ್‌ ಡೇವಿಡ್‌, ಮಿಲನ ನಾಗರಾಜ್‌ ಅಭಿನಯದ ‘ಲವ್‌ ಮಾಕ್ಟೇಲ್‌–2’ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ. ಮೊದಲ ಭಾಗ ಹಿಟ್‌ ಆಗಿರುವುದೇ ಇದಕ್ಕೆ ಕಾರಣ.ಡಾರ್ಲಿಂಗ್‌ ಕೃಷ್ಣ ಹಾಗೂ ಅವರ ಪತ್ನಿ, ನಟಿ ಮಿಲನಾ ನಾಗರಾಜ್‌ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ನಿಧಿ’ಯನ್ನು ಕಳೆದುಕೊಂಡ ‘ಆದಿ’ಯ ಕಥೆ ಎರಡನೇ ಭಾಗದಲ್ಲಿ ಸಾಗುತ್ತದೆ. ‘ಎರಡನೇ ಭಾಗದಲ್ಲಿ ನಿಧಿ ಪಾತ್ರ ಇರುತ್ತದೆ. ಆದಿ ನೆನಪುಗಳಲ್ಲಿ ನಿಧಿ ಜೀವಂತವಾಗಿರುತ್ತಾಳೆ ಎನ್ನುವ ಮೂಲಕ ಚಿತ್ರತಂಡವು ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇದೇ ಮೊದಲ ಬಾರಿಗೆ ನಟ ಅಚ್ಯುತ್ ಕುಮಾರ್ ನಾಯಕರಾಗಿ ನಟಿಸಿರುವ ‘ಫೋರ್ ವಾಲ್ಸ್’ ಕೂಡಾ ಇಂದು ತೆರೆ ಕಾಣುತ್ತಿದೆ. ಎಸ್.ಎಸ್ ಸಜ್ಜನ್, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಚ್ಯುತ್ ಕುಮಾರ್, ಮೂರು ಶೇಡ್‌ಗಳಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫೆ.11ರಂದೇ ಎಸ್.ಎಸ್. ರವಿಗೌಡ ಹಾಗೂ ‘ಬಿಗ್‌ಬಾಸ್‌’ ಖ್ಯಾತಿಯ ದಿವ್ಯ ಸುರೇಶ್ ಅಭಿನಯಿಸಿರುವ ‘ರೌಡಿಬೇಬಿ’ ತೆರೆ ಕಾಣಲಿದೆ.

ಕೆಲ ವರ್ಷ ಹಿಂದೆಯೇ ‘ಕಾಂಟ್ರ್ಯಾಕ್ಟ್‌’ ಎಂಬ ಶೀರ್ಷಿಕೆಯಡಿ ಆರಂಭವಾಗಿದ್ದನಟ ಅರ್ಜುನ್ ಸರ್ಜಾ ಹಾಗೂ ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಸಿನಿಮಾ ಇದೀಗ ‘ಒಪ್ಪಂದ’ ಎಂಬ ಬದಲಾದ ಶೀರ್ಷಿಕೆಯಲ್ಲಿ ತೆರೆ ಕಾಣುತ್ತಿದೆ. ಸಂಜಯ್ ಗೊಡಾವತ್ ಅರ್ಪಿಸುವ ಎಸ್.ಎಫ್. ಎಂಟರ್‌ಟೈನರ್ ಲಾಂಛನದಲ್ಲಿ ಫರ್ಹಿನ್ ಅವರು ನಿರ್ಮಿಸಿರುವ ಈ ಚಿತ್ರವನ್ನು ಎಸ್.ಎಸ್. ಸಮೀರ್ ನಿರ್ದೇಶಿಸಿದ್ದಾರೆ.

ಶಾಂಡಿಲ್ಯ(ಹರ್ಷ ಬಿ.ಟಿ) ನಿರ್ದೇಶನದ ಗೋವಿಂದ, ನಿರೋಷ, ಚಿರಾಗ್‌, ಕಾವ್ಯ ಮತ್ತಿತರರು ಅಭಿನಯಿಸಿರುವ ‘ಪ್ರೀತಿಗಿಬ್ಬರು’ ಸಿನಿಮಾ, ಅಭಿನವ್‌ ಸ್ಟುಡಿಯೋಸ್‌ ಲಾಂಛನದಲ್ಲಿ ಅಭಿಲಾಷ್‌ ಚಕ್ಲಾ ಹಾಗೂ ನವಾಜಿತ್‌ ಬಲ್ಲರ್‌ ನಿರ್ಮಿಸಿರುವ, ಕುಮಾರ ದತ್‌ ನಿರ್ದೇಶನದ ಸಿನಿಮಾ ’ಇದೇ ಅಂತರಂಗ ಶುದ್ಧಿ’ಯೂ ಇಂದು ಬಿಡುಗಡೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT