ಸುದೀಪ್ ಅಭಿನಯದ ‘ಪೈಲ್ವಾನ್‌’ ಟೀಸರ್‌ ಸಂಕ್ರಾಂತಿ ಹಬ್ಬಕ್ಕೆ

7

ಸುದೀಪ್ ಅಭಿನಯದ ‘ಪೈಲ್ವಾನ್‌’ ಟೀಸರ್‌ ಸಂಕ್ರಾಂತಿ ಹಬ್ಬಕ್ಕೆ

Published:
Updated:

‘ಅಭಿನಯ ಚಕ್ರವರ್ತಿ’ ಸುದೀಪ್‌ ಮತ್ತು ‘ಹೆಬ್ಬುಲಿ’ ಚಿತ್ರದ ಖ್ಯಾತಿಯ ಕೃಷ್ಣ ಅವರ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ದೊಡ್ಡ ಬಜೆಟ್‌ನ ಚಿತ್ರ ‘ಪೈಲ್ವಾನ್’ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ಈ ಚಿತ್ರಕ್ಕಾಗಿ ಸುದೀಪ್ 13 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಪೈನ್ವಾಲ್‌ ಡ್ರೆಸ್‌ನಲ್ಲಿದ್ದ ಸುದೀ‍ಪ್ ಅವರ ಪೋಸ್ಟರ್‌ ವೈರಲ್‌ ಆಗಿತ್ತು. ಈಗ ಸಂಕ್ರಾಂತಿ ಹಬ್ಬಕ್ಕೆ ಚಿತ್ರದ ಟೀಸರ್‌ ಬಿಡುಗಡೆಗೆ ಚಿತ್ರತಂಡ ಸಜ್ಜಾಗಿದೆ.

‘ಸಂಕ್ರಾಂತಿ ಹಬ್ಬದಂದು ಸಂಜೆ 4.45ಕ್ಕೆ ಟೀಸರ್‌ ಬಿಡುಗಡೆಯಾಗಲಿದೆ. ಚಿತ್ರತಂಡಕ್ಕೆ ನನ್ನ ಶುಭಾಶಯಗಳು’ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

‘ರಾಕಿಂಗ್‌ ಸ್ಟಾರ್‌’ ಯಶ್ ನಟನೆಯ ‘ಕೆಜಿಎಫ್’ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಗೊಂಡು ಯಶಸ್ಸಿನ ನಾಗಾಲೋಟವನ್ನು ಮುಂದುವರಿಸಿದೆ. ‘ಪೈಲ್ವಾನ್’ ಸಿನಿಮಾವನ್ನೂ ಎಂಟು ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ನಿರ್ದೇಶಕ ಕೃಷ್ಣ ಮತ್ತು ಸುದೀಪ್ ಅವರ ವೃತ್ತಿಬದುಕಿನಲ್ಲಿ ಈ ಚಿತ್ರ ಹೊಸದೊಂದು ಮೈಲುಗಲ್ಲು ಸ್ಥಾಪಿಸುವ ಸಾಧ್ಯತೆಯಿದೆ. 

ಕುಸ್ತಿ ಆಧಾರಿತ ಚಿತ್ರ ಇದು. ಹಾಲಿವುಡ್‌ನ ಸಾಹಸ ನಿರ್ದೇಶಕ ಲಾರ್ನೆಲ್‌ ಸ್ಟೋವಲ್ ಇದಕ್ಕೆ ಸಾಹಸ ನಿರ್ದೇಶಿಸಿದ್ದಾರೆ. ಹಿಂದಿ ಭಾಷೆಯ ಕಿರುತೆರೆ ನಟಿ ಆಕಾಂಕ್ಷಾ ಸಿಂಗ್ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಬಾಲಿವುಡ್‌ ನಟ ಸುನೀಲ್ ಶೆಟ್ಟಿ ಕೂಡ ಅಭಿನಯಿಸಿದ್ದಾರೆ.


‘ಪೈಲ್ವಾನ್’ ಚಿತ್ರದಲ್ಲಿ ನಟ ಸುದೀಪ್

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !