ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿ,ಪತ್ನಿಯ ಹವಾ....ಕಳೆಗುಂದಿದ‘ಪಾಣಿಪತ್‌’

Last Updated 9 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಕಾರ್ತಿಕ್‌ ಆರ್ಯನ್‌, ಭೂಮಿ ಪಡ್ನೇಕರ್‌ ಮತ್ತು ಅನನ್ಯಾ ಪಾಂಡೆ ಅವರಂತಹ ಹೊಸ ಮುಖಗಳಿರುವ ‘ಪತಿ ಪತ್ನಿ ಔರ್‌ ವೋ’ ಮತ್ತು ಅರ್ಜುನ್ ಕಪೂರ್‌ , ಸಂಜಯ್‌ ದತ್‌ ನಟಿಸಿರುವ ‘ಪಾಣಿಪತ್‌’ ಏಕಕಾಲಕ್ಕೆ ಬಿಡುಗಡೆಯಾಗಿವೆ.

ಮೊದಲ ದಿನವೇ ‘ಪತಿ ಪತ್ನಿ’ಗೆ ಭರ್ಜರಿ ಓಪನಿಂಗ್ ಸಿಕ್ಕಿದ್ದು, ₹9.10 ಕೋಟಿ ಗಳಿಸಿದೆ. ಬರೀ ಹೊಸಬರೇ ಇರುವ ಚಿತ್ರ ಮೊದಲ ದಿನವೇ ಇಷ್ಟೊಂದು ಹಣ ಗಳಿಸಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಶುಕ್ರವಾರದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಮತ್ತೊಂದೆಡೆ, ಐತಿಹಾಸಿಕ ಕತೆ ಹೊಂದಿರುವ ಅಶುತೋಷ್‌ ಗಾವರಿಕರ್‌ ಅವರಂತಹ ದಿಗ್ಗಜ ನಿರ್ದೇಶಕರ ‘ಪಾಣಿಪತ್‌’ ಗಳಿಕೆಯಲ್ಲಿ ಹಿಂದೆ ಬಿದ್ದಿದೆ. ಮೊದಲ ದಿನ ಈ ಚಿತ್ರ ಗಳಿಸಿದ್ದು ₹4.25 ಕೋಟಿ ಎಂದು ಅಂದಾಜಿಸಲಾಗಿದೆ. ಮರಾಠ ಮಹಾರಾಜನ ಕದನದ ಕತೆಯುಳ್ಳ ಸಿನಿಮಾ ಮಹಾರಾಷ್ಟ್ರದಲ್ಲಿ ಮಾತ್ರ ಒಳ್ಳೆಯ ಕಲೆಕ್ಷನ್‌ ಮಾಡುತ್ತಿದೆ.

‘ಪಾಣಿಪತ್‌’ ಮೂರು ತಾಸಿನ ಚಿತ್ರ. ಮೇಲಾಗಿ ಐತಿಹಾಸಿಕ ಚಿತ್ರ. ಪ್ರೇಕ್ಷಕರು ಮತ್ತು ಯುವ ಸಮೂಹ ಹಾಸ್ಯಮಯ ಚಿತ್ರಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಇದರಿಂದ ‘ಪಾಣಿಪತ್‌’ಗಿಂತ ‘ಪತಿ, ಪತ್ನಿ’ ಹವಾ ಜೋರಾಗಿದೆ ಎನ್ನುವುದು ಬಾಲಿವುಡ್‌ ಪಂಡಿತರ ವಿಶ್ಲೇಷಣೆ.

ಕಾರ್ತಿಕ್‌ ಆರ್ಯನ್‌, ದೀಪಾ ಪಡ್ನೇಕರ್‌ ಮತ್ತು ಅನನ್ಯಾ ಪಾಂಡೆ ಜೋಡಿ ಪ್ರೇಕ್ಷಕರಿಗೆ ಕಚಗುಳಿ ಇಡುತ್ತಿದೆ. ಚಿತ್ರದ ಎರಡು ಹಾಡುಗಳು ಈಗಾಗಲೇ ಹಿಟ್‌ ಆಗಿವೆ.1978ರಲ್ಲಿ ಬಿಡುಗಡೆಯಾಗಿದ್ದ‘ಪತಿ, ಪತ್ನಿ ಔರ್‌ ವೋ’ ಸಿನಿಮಾದ ಯಥಾವತ್‌ ರಿಮೇಕ್‌ ಇದು. ಆ ಚಿತ್ರದಲ್ಲಿ ಸಂಜೀವ್‌ ಕುಮಾರ್‌, ವಿದ್ಯಾ ಸಿನ್ಹಾ ಮತ್ತು ರಂಜಿತಾ ನಟಿಸಿದ್ದರು. ಗಂಡ, ಹೆಂಡತಿ ಮತ್ತು ಮತ್ತೊಬ್ಬಳ ನಡುವಿನ ನವೀರಾದ ಹಾಸ್ಯವೇ ಚಿತ್ರದ ಕಥಾವಸ್ತು.ಅರ್ಜುನ್‌ ಕಪೂರ್‌, ಸಂಜಯ್ ದತ್‌ ಮುಖ್ಯ ಭೂಮಿಕೆಯಲ್ಲಿದ್ದರೂ ‘ಪಾಣಿಪತ್’ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ.

ಮರಾಠರು ಮತ್ತು ಆಫ್ಗನ್‌ ದೊರೆ ನಡುವಿನ ಮೂರನೇ ಪಾಣಿಪತ್‌ ಕದನವೇ ಚಿತ್ರದ ಕಥಾವಸ್ತು. ಮರಾಠ ದೊರೆ ಸದಾಶಿವ ರಾವ್‌ ಭಾವು ಪಾತ್ರದಲ್ಲಿ ಅರ್ಜುನ್ ಕಪೂರ್‌ ಮತ್ತು ಆಫ್ಗನ್‌ ದೊರೆ ಅಹಮ್ಮದ್‌ ಶಾ ಅಬ್ದಾಲಿ ಪಾತ್ರದಲ್ಲಿ ಸಂಜಯ್‌ ದತ್‌ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT