ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಿ ಮಾಸ್ಟರ್‌ ಚಿತ್ರದಲ್ಲಿ ಟಾಲಿವುಡ್‌ ಪವರ್‌ ಸ್ಟಾರ್‌

Last Updated 30 ನವೆಂಬರ್ 2020, 8:05 IST
ಅಕ್ಷರ ಗಾತ್ರ

ಟಾಲಿವುಡ್‌ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಅವರು ನಿರ್ದೇಶಕ ಜಾನಿ ಮಾಸ್ಟರ್‌ ಅವರ ಹೊಸ ಚಿತ್ರವೊಂದರಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ.

ಪವನ್‌ ಕೈಯಲ್ಲಿ ಹಲವು ಚಿತ್ರಗಳಿವೆ. ಅವುಗಳ ಕೆಲಸದಲ್ಲೇ ಅವರು ಬ್ಯುಸಿಯಾಗಿದ್ದಾರೆ. ವಕೀಲ್‌ ಸಾಬ್‌ (ಹಿಂದಿಯ ಪಿಂಕ್‌ ಚಿತ್ರದ ರಿಮೇಕ್‌) ಸೇರಿದಂತೆ ನಾಲ್ಕು ಚಿತ್ರಗಳ ಕಾರ್ಯಗಳು ಈಗಾಗಲೇ ಪ್ರಗತಿಯಲ್ಲಿವೆ. ಈ ನಡುವೆಯೂ ಅವರು ಹೊಸ ಆಫರ್‌ನ್ನು ಒಪ್ಪಿಕೊಂಡಿದ್ದಾರೆ.

ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ಕಥೆ ಹೇಳಿದಾಗ ಪವನ್‌ ಅವರಿಗೆ ತುಂಬಾ ಇಷ್ಟವಾಯಿತು. ಮರು ಯೋಚಿಸದೇ ಒಪ್ಪಿಕೊಂಡರು. ಚಿತ್ರದ ಹೆಸರು ಇನ್ನೂ ಗೊತ್ತಾಗಿಲ್ಲ.

ಈ ನಡುವೆ ಜನಸೇನಾ ಸಂಘಟನೆಯ ಮುಖ್ಯಸ್ಥರೂ ಆಗಿರುವ ಪವನ್‌ ಅವರು ಅದರ ಸೇವಾ ಕಾರ್ಯದಲ್ಲೂ ತೊಡಗಿದ್ದಾರೆ. ಡಿಸೆಂಬರ್‌ ಎರಡನೇ ವಾರದಲ್ಲಿ ಆಂಧ್ರ ಪ್ರದೇಶದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂಘಟನೆಯ ಚಟುವಟಿಕೆಗಳನ್ನು ಪರಿಶೀಲಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT