ಭಾನುವಾರ, ಸೆಪ್ಟೆಂಬರ್ 26, 2021
28 °C

ಹೆಡ್‌ಬುಷ್‌ ಸಿನಿಮಾ: ‘ಡಾಲಿ’ ಧನಂಜಯ್‌ಗೆ ಪಾಯಲ್‌ ರಾಜ್‌ಪುತ್‌ ಜೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಡಾಲಿ ಧನಂಜಯ್‌ ನಾಯಕರಾಗಿ ನಟಿಸುತ್ತಿರುವ ಡಾನ್‌ ಜಯರಾಜ್‌ ಜೀವನಕಥೆ ಆಧಾರಿತ ‘ಹೆಡ್‌ಬುಷ್‌’ ಚಿತ್ರಕ್ಕೆ ತೆಲುಗಿನ ಖ್ಯಾತ ನಟಿ ಪಾಯಲ್‌ ರಾಜ್‌ಪುತ್‌ ನಾಯಕಿಯಾಗಿ ಜೋಡಿಯಾಗಲಿದ್ದಾರೆ.

ನಟಿ ಪಾಯಲ್‌ ಅವರು ತೆಲುಗಿನ ‘ಆರ್‌ಎಕ್ಸ್‌ 100, ಆರ್‌ಡಿಎಕ್ಸ್‌ ಲವ್‌’ ಮುಂತಾದ ಹಿಟ್‌ ಚಿತ್ರಗಳಲ್ಲಿ ನಟಿಸಿದ್ದರು. ಡಾಲಿ ಪಿಕ್ಚರ್ಸ್‌ ಮತ್ತು ಸೋಮಣ್ಣ ಟಾಕೀಸ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ, ಅಗ್ನಿ ಶ್ರೀಧರ್‌ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರವನ್ನು ಶೂನ್ಯ ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಶರಣ್‌ ರಾಜ್‌ ಸಂಗೀತವಿದ್ದು, ಬಾದಲ್‌ ನಂಜುಂಡಸ್ವಾಮಿ ಪ್ರೊಡಕ್ಷನ್‌ ಡಿಸೈನರ್‌ ಆಗಿದ್ದಾರೆ.

‘ಹೆಡ್‌ಬುಷ್‌ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭಗೊಳ್ಳಲಿದ್ದು, ದೊಡ್ಡ ಬಜೆಟ್‌ ಸಿನಿಮಾ ಅದು. ಅಗ್ನಿ ಶ್ರೀಧರ್‌ ಅವರು ‘ದಾದಾಗಿರಿಯ ಆ ದಿನಗಳು’ ಓದಿದರೆ, ಅವರ ಜೊತೆ ಕುಳಿತು ಮಾತನಾಡಿದರೆ ಅವರ ಅನುಭವ ಹೇಳುತ್ತಾರೆ. ಶ್ರೀಧರ್‌ ಅವರ ಜೊತೆ ಕುಳಿತರೆ ಚರ್ಚೆ ಮುಗಿಯುವುದೇ ಇಲ್ಲ. ಅದೊಂದು ಬೇರೆ ಜಗತ್ತು ನಾವು ಯಾವತ್ತೂ ಅದನ್ನು ನೋಡಲು ಸಾಧ್ಯವಿಲ್ಲ. ಕಥೆಗಳನ್ನು ಕೇಳುತ್ತಾ ಆ ಜಗತ್ತಿನ ಒಳಗೆ ಪ್ರವೇಶಿಸಬೇಕು. ಮಾನಸಿಕವಾಗಿ ಈ ಪಾತ್ರಕ್ಕೆ ಸಿದ್ಧತೆ ನಡೆಸುತ್ತಿದ್ದೇನೆ. ಜೊತೆಗೆ ‘ಜಯರಾಜ್‌’ ಪಾತ್ರಕ್ಕಾಗಿ ದಪ್ಪ ಆಗುತ್ತಿದ್ದೇನೆ’ ಎಂದು ಧನಂಜಯ್‌ ಇತ್ತೀಚೆಗೆ ‘ಪ್ರಜಾವಾಣಿ’ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು