ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿಕೆ ಇಲ್ಲದ ಸೀರೆ: ಪ್ರಿಯಾಂಕ ಚೋಪ್ರಾ ಟ್ರೋಲ್

ಪ್ರಿಯಾಂಕ ಚೋಪ‍್ರಾ ಮತ್ತೆ ಟ್ರೋಲ್
Last Updated 9 ಜೂನ್ 2019, 7:38 IST
ಅಕ್ಷರ ಗಾತ್ರ

ಬಾಲಿವುಡ್‌ಗಿಂತ ಹಾಲಿವುಡ್‌ನಲ್ಲೇ ಹೆಚ್ಚು ಜನಪ್ರಿಯವಾಗುತ್ತಿರುವ ನಟಿ ಪ್ರಿಯಾಂಕ ಚೋಪ್ರಾ ಏನೇ ಮಾಡಿದರೂ ಸುದ್ದಿಯಾಗುತ್ತಾರೆ. ‘ಭಾರತ್’ ಸಿನಿಮಾ ಕೈಬಿಟ್ಟಿದ್ದು, ನಿಕ್ ಜೋನಸ್ ಮದುವೆಯಾಗಿದ್ದು, ಮೆಟ್‌ ಗಾಲಾದಲ್ಲಿ ವಿಚಿತ್ರವಾಗಿ ಅಲಂಕರಿಸಿಕೊಂಡು ಸುದ್ದಿಯಾಗಿದ್ದು... ಹೀಗೆ ಪ್ರಿಯಾಂಕ ಇದ್ದಲ್ಲಿ ಸುದ್ದಿಗಳಿಗೆ ಕೊರತೆ ಇಲ್ಲ ಎಂಬಂತಾಗಿದೆ. ಈಗಲೂ ಮತ್ತೊಮ್ಮೆ ಪ್ರಿಯಾಂಕ ಸುದ್ದಿಯಾಗಿದ್ದಾರೆ ಅದೂ ಟ್ರೋಲ್ ಮೂಲಕ!

ಪ್ರಿಯಾಂಕ ಈಚೆಗಷ್ಟೇ ಅಮೆರಿಕದ ‘ಇನ್‌ಸ್ಟೈಲ್’ ಪತ್ರಿಕೆಯ ಜೂನ್ ತಿಂಗಳ ಮುಖಪುಟಕ್ಕಾಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದರು. ಬಂಗಾರ ಬಣ್ಣದ ರವಿಕೆಯಿಲ್ಲದ ಸೀರೆಯಲ್ಲಿ ಬೆನ್ನು ತೋರುತ್ತಾ ಪ್ರಿಯಾಂಕ ಮುಖಪುಟಕ್ಕೆ ಪೋಸ್ ನೀಡಿದ್ದರು. ಇದೇ ವಿಷಯವನ್ನಿಟ್ಟುಕೊಂಡು ನೆಟ್ಟಿಗರು ಪ್ರಿಯಾಂಕ ವಿರುದ್ಧ ಟ್ರೋಲ್‌ಗಳ ಸುರಿಮಳೆಗೈದಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಪ್ರಿಯಾಂಕಾಳ ಸೀರೆ ಡಿಸೈನರ್ ತರುಣ್ ತಹ್ಲಾನಿ ಪ್ರಿಯಾಂಕಳ ರವಿಕೆಯಿಲ್ಲದ ಸೀರೆ ‘ಗ್ಲೋಬಲ್ ಸ್ಟೇಟ್‌ಮೆಂಟ್’ ಎಂದು ಪ್ರತಿಕ್ರಿಯಿಸಿದ್ದಾರೆ.

‘ರವಿಕೆಯಿಲ್ಲದ ಸೀರೆ ಅಶ್ಲೀಲವಲ್ಲ. ಇತ್ತೀಚೆಗೆ ರವಿಕೆಯಿಲ್ಲದ ಸೀರೆ ಜಾಗತಿಕವಾಗಿ ಜನಪ್ರಿಯವಾಗುತ್ತಿದೆ. ಪ್ರಿಯಾಂಕ ನಿಜಕ್ಕೂ ಆಧುನಿಕ ಭಾರತದ ಮಾದರಿ’ಎಂದು ತರುಣ್ ಹೇಳಿದ್ದಾರೆ.

ಸೀರೆಯ ಫೋಟೊಶೂಟ್‌ಗೆ ಸಂಬಂಧಿಸಿದಂತೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊ ಹಂಚಿಕೊಂಡಿರುವ ಪ್ರಿಯಾಂಕ, ‘ಜಾಗತಿಕ ಸಂಸ್ಕೃತಿಯಲ್ಲಿ ಫ್ಯಾಷನ್ ಪಾತ್ರ ಮಹತ್ವದ್ದು. ಭಾರತದ ಮುಖ್ಯ ಉಡುಗೆಯಾಗಿ ಸೀರೆ ಗುರುತಿಸಿಕೊಂಡಿದೆ. ಸೀರೆಯ ಸೌಂದರ್ಯ, ಅದರ ಕೌಶಲ ಅದನ್ನು ಉಡುವ ಶೈಲಿಗೆ ಮಾತ್ರವಷ್ಟೇ ಅಲ್ಲ, ಸೀರೆಯ ಸೊಬಗು, ಅದರಲ್ಲಿನ ಹೆಣ್ತನದ ಪ್ರತೀಕ ಮತ್ತು ಶಕ್ತಿಯ ಕಾರಣಕ್ಕಾಗಿ ನನಗೆ ಸೀರೆಯೆಂದರೆ ಪ್ರೀತಿ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT