7

ಐದು ಪಾತ್ರಗಳಲ್ಲಿ ಪ್ರಿಯಾಂಕಾ!

Published:
Updated:

ಹಾಲಿವುಡ್‌ನ ‘ಕ್ವಾಂಟಿಕೊ’ ಸರಣಿಯಲ್ಲಿ ಬ್ಯುಸಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಸದ್ಯದಲ್ಲೇ ಸಲ್ಮಾನ್‌ ಖಾನ್‌ ನಟನೆಯ ‘ಭಾರತ್‌’ ಸಿನಿಮಾದ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಬಾಲಿವುಡ್‌ಗೆ ಪಿಗ್ಗಿ ಹಿಂತಿರುಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಸಿನಿಮಾದಲ್ಲಿ ಐದು ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 28 ವರ್ಷದ ಯುವತಿಯಿಂದ 60 ವರ್ಷದ ಮುದುಕಿ ಪಾತ್ರದವರೆಗೂ 5 ನಮೂನೆಯ ಪಾತ್ರಗಳನ್ನು ಪ್ರಿಯಾಂಕಾ ನಿರ್ವಹಿಸಲಿದ್ದಾರೆ. 

ಈ ಸಿನಿಮಾದ ನಿರ್ದೇಶಕ ಆಲಿ ಅಬ್ಬಾಸ್‌ ಜಾಫರ್‌. ತನ್ನ ಗೆಳೆಯನ ಸಿನಿಮಾದಲ್ಲಿ ನಟಿಸುವುದಕ್ಕೆ ಪ್ರಿಯಾಂಕಾ ನಯಾಪೈಸೆ ಸಂಭಾವನೆ ಪಡೆಯುತ್ತಿಲ್ಲ ಎಂದು ಒಂದು ಕಡೆ ಸುದ್ದಿ ಹರಿದಾಡುತ್ತಿದ್ದರೆ, ಈ ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ ₹ 12 ಕೋಟಿ ಸಂಭಾವನೆಗೆ ಕೇಳಿದ್ದಾರೆ ಎಂಬ ಸುದ್ದಿಗಳೂ ಇವೆ. ಈ ಸಿನಿಮಾದಲ್ಲಿ ಸಲ್ಮಾನ್‌ ಹಾಗೂ ಪ್ರಿಯಾಂಕಾ ನಟಿಸುತ್ತಿರುವುದರಿಂದ ಅಭಿಮಾನಿಗಳು ಈ ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ. 2019ರ ಈದ್‌ಮಿಲಾದ್‌ ದಿನ ಈ ಚಿತ್ರ ತೆರೆ ಕಾಣಲಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !