ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ 15ಕ್ಕೆ ‘ಜಾಕಿ’ ಮತ್ತೆ ತೆರೆಗೆ

Published 14 ಮಾರ್ಚ್ 2024, 0:12 IST
Last Updated 14 ಮಾರ್ಚ್ 2024, 0:12 IST
ಅಕ್ಷರ ಗಾತ್ರ

ಮುಂದಿನ ಮಾರ್ಚ್‌ 17ರಂದು ಸ್ಯಾಂಡಲ್‌ವುಡ್‌ನ ‘ಪವರ್‌ ಸ್ಟಾರ್‌’ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನ. ಈ ಹೊಸ್ತಿಲಲ್ಲೇ ಮಾರ್ಚ್‌ 15ರಂದು ಪುನೀತ್‌ ನಟನೆಯ ಹಿಟ್‌ ಸಿನಿಮಾ ‘ಜಾಕಿ’ ಮತ್ತೆ ತೆರೆಗೆ ಬರಲಿದೆ. 

ಸೂರಿ ನಿರ್ದೇಶನದ ‘ಜಾಕಿ’ ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋಸ್‌ ಈ ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿದ್ದು, ಪಿಆರ್‌ಕೆ ಪ್ರೊಡಕ್ಷನ್ಸ್‌ ಪ್ರಸೆಂಟ್‌ ಮಾಡುತ್ತಿದೆ. ರಾಜ್ಯದ 50ಕ್ಕೂ ಅಧಿಕ ಏಕಪರದೆ ಚಿತ್ರಮಂದಿರಗಳಲ್ಲಿ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ. ಥಿಯೇಟರ್‌ಗಳ ಪಟ್ಟಿಯನ್ನು ಕೆಆರ್‌ಜಿ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ದಿನಕ್ಕೆ ನಾಲ್ಕು ಪ್ರದರ್ಶನವಿದ್ದು, ಹಲವು ಚಿತ್ರಮಂದಿರಗಳಲ್ಲಿ ಟಿಕೆಟ್‌ ಪೂರ್ಣ ಬಿಕರಿಯಾಗಿದೆ. ಪ್ರತಿ ವರ್ಷ ಪುನೀತ್‌ ಅವರ ಜನ್ಮದಿನದಂದು ಅವರ ನಟನೆಯ ಒಂದು ಸಿನಿಮಾ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ ಕೆಆರ್‌ಜಿ.

ಪುನೀತ್‌ ಅಗಲಿದ ದಿನದಿಂದಲೂ(2021ರ ಅ.29) ಒಂದಲ್ಲ ಒಂದು ರೀತಿಯಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸಂಭ್ರಮಿಸುತ್ತಲೇ ಬಂದಿದ್ದಾರೆ. 2022ರ ಮಾರ್ಚ್‌ 17ರಂದು ‘ಪುನೀತ್‌’ ನಟನೆಯ ಕೊನೆಯ ಕಮರ್ಷಿಯಲ್‌ ಸಿನಿಮಾ ‘ಜೇಮ್ಸ್‌’ ಬಿಡುಗಡೆಗೊಂಡಿತ್ತು. ಇದನ್ನೊಂದು ಹಬ್ಬವಾಗಿ ಅಭಿಮಾನಿಗಳು ಆಚರಿಸಿದ್ದರು. ಬಳಿಕ ಎಸ್‌. ನಾಗೇಂದ್ರ ಪ್ರಸಾದ್‌ ನಿರ್ದೇಶನದ ‘ಲಕ್ಕಿಮ್ಯಾನ್‌’ 2022ರ ಸೆ.9ರಂದು ತೆರೆಕಂಡಿತ್ತು. ಇದರಲ್ಲಿ ಪುನೀತ್‌ ಪ್ರೇಕ್ಷಕರೆದುರು ದೇವರಾಗಿ ಪ್ರತ್ಯಕ್ಷವಾಗಿದ್ದರು. 2022ರ ಅಕ್ಟೋಬರ್‌ 28ರಂದು ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ, ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಅವರ ಜೊತೆಗೂಡಿ ಪುನೀತ್‌ ರಾಜ್‌ಕುಮಾರ್‌
ತಯಾರಿಸಿದ್ದ ಡಾಕ್ಯೂಫಿಲಂ ‘ಗಂಧದಗುಡಿ’ ಬಿಡುಗಡೆಯಾಗಿತ್ತು. ಇದೇ ಡಾಕ್ಯುಫಿಲಂ 2023ರ ಮಾರ್ಚ್‌ 17ರಂದು ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಇದೀಗ ಪುನೀತ್‌ ಅವರ ಸಿನಿಮಾಗಳ ಮರುಬಿಡುಗಡೆ ಅಭಿಮಾನಿಗಳಿಗೆ
ಖುಷಿ ತಂದಿದೆ. ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT