ಸ್ಮಶಾನದಲ್ಲಿ ಬಿದ್ದ ರಾಧಿಕಾ ಕುಮಾರಸ್ವಾಮಿ

7

ಸ್ಮಶಾನದಲ್ಲಿ ಬಿದ್ದ ರಾಧಿಕಾ ಕುಮಾರಸ್ವಾಮಿ

Published:
Updated:
Prajavani

‘ಭೈರಾದೇವಿ’ ಚಿತ್ರದ ಶೂಟಿಂಗ್‌ ವೇಳೆ ನಟಿ ರಾಧಿಕಾ ಕುಮಾರಸ್ವಾಮಿ ಕಾಲುಜಾರಿ ಬಿದ್ದು ತೀವ್ರ ಗಾಯಗೊಂಡಿದ್ದಾರೆ.

ಮೊನ್ನೆ ರಾತ್ರಿ ಬೆಂಗಳೂರಿನ ಶಾಂತಿನಗರದ ಸ್ಮಶಾನದಲ್ಲಿ ಚಿತ್ರದ ಶೂಟಿಂಗ್‌ ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಗೋರಿಯೊಂದರ ಮೇಲೆ ಅಘೋರಿ ಗೆಟಪ್‌ನಲ್ಲಿದ್ದ ರಾಧಿಕಾ ತ್ರಿಶೂಲ ಹಿಡಿದು ನೃತ್ಯ ಮಾಡುತ್ತಿದ್ದರು. ಆ ವೇಳೆ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಅವರ ಬೆನ್ನುಹುರಿ(ಸ್ಪೈನಲ್ ಕಾರ್ಡ್)ಗೆ ಪೆಟ್ಟಾಗಿದೆ. ಇನ್ನೊಂದು ತಿಂಗಳು ಕಾಲ ಅವರು ಓಡಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹಾಗಾಗಿ, ಸಿನಿಮಾದ ಚಿತ್ರೀಕರಣವನ್ನು ಮುಂದೂಡಲಾಗಿದೆ. 


ಭೈರಾದೇವಿ

ಶ್ರೀಜೈ ನಿರ್ದೇಶಿಸುತ್ತಿರುವ ಈ ಸಿನಿಮಾಕ್ಕೆ ರಾಧಿಕಾ ಅವರೇ ಬಂಡವಾಳ ಹೂಡಿದ್ದಾರೆ. ಸ್ವಂತ ಬ್ಯಾನರ್ ಆದ ಶಮಿಕಾ ಎಂಟರ್ ಪ್ರೈಸಸ್‌ನಡಿ ಈ ಚಿತ್ರ ನಿರ್ಮಿಸಲಾಗುತ್ತಿದೆ. ಭೈರಾದೇವಿಯ ಮತ್ತೊಂದು ಹೆಸರು ಕಾಳಿ. ಹಾಗಾಗಿ, ಈ ಸಿನಿಮಾದಲ್ಲಿ ರಾಧಿಕಾ ಕಾಳಿ ಮತ್ತು ಅಘೋರಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.   

ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಹಾರರ್‌, ಸಸ್ಪೆನ್ಸ್ ಚಿತ್ರ ಇದು. ನಟ ರಮೇಶ್ ಅರವಿಂದ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಉಳಿದಂತೆ ಸ್ಕಂದ ಅಶೋಕ್, ಶಿವರಾಂ, ರಂಗಾಯಣ ರಘು ಮತ್ತು ಅನು ಪ್ರಭಾಕರ್ ತಾರಾಗಣದಲ್ಲಿದ್ದಾರೆ. ರವಿಶಂಕರ್ ಅವರದು ದ್ವಿಪಾತ್ರ. ಅಘೋರಿ ಪಾತ್ರದಲ್ಲಿ ನಟಿಸಿರುವ ಅವರು ಹಾಡೊಂದಕ್ಕೆ ಹಿನ್ನೆಲೆ ಗಾಯನವನ್ನೂ ನೀಡಿದ್ದಾರೆ. 

ಬರಹ ಇಷ್ಟವಾಯಿತೆ?

 • 17

  Happy
 • 5

  Amused
 • 3

  Sad
 • 3

  Frustrated
 • 5

  Angry

Comments:

0 comments

Write the first review for this !