‘ದರ್ಬಾರ್’ ಚಿತ್ರದ ಬಳಿಕ ‘ಸೂಪರ್ ಸ್ಟಾರ್’ ರಜನಿಕಾಂತ್ ಅವರಿಗೆ ‘ತಲೈವರ್ 168’ ಚಿತ್ರದಲ್ಲಿ ನಯನತಾರಾ ಮತ್ತೆ ನಾಯಕಿಯಾಗಿದ್ದಾರೆ. ಈ ಚಿತ್ರ ನಿರ್ಮಿಸುತ್ತಿರುವ ಸನ್ ಪಿಕ್ಚರ್ಸ್ ಈ ಮಾಹಿತಿಯನ್ನು ಅಧಿಕೃತವಾಗಿ ದೃಢಪಡಿಸಿದೆ. ಬಹುಭಾಷಾ ತಾರೆ ನಯನತಾರಾ ‘ಲೇಡಿ ಸೂಪರ್‌ಸ್ಟಾರ್’ ಎಂದು ಖ್ಯಾತಿ ಪಡೆದಿದ್ದಾರೆ.

‘ತಲೈವರ್ 168’ ಚಿತ್ರ ನಿರ್ದೇಶಿಸುತ್ತಿರುವುದು ಸಿರುಥೈ ಶಿವ. ಇದರಲ್ಲಿ ಕೀರ್ತಿ ಸುರೇಶ್ ಅವರೂ ನಟಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಸಿದ್ಧಾರ್ಥ ಅವರನ್ನು ಕರೆತರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಆದರೆ, ಇನ್ನೂ ಇದು ಅಧಿಕೃತಗೊಂಡಿಲ್ಲ. ‘ದರ್ಬಾರ್’ ಚಿತ್ರದ ಬಳಿಕ ‘ತಲೈವ’ ನಟನೆಯ ಈ ಚಿತ್ರ ದೊಡ್ಡಮಟ್ಟದ ನಿರೀಕ್ಷೆ ಹೆಚ್ಚಿಸಿದೆ.

ಮತ್ತೊಂದೆಡೆ ಹಲವು ವರ್ಷದ ಬಳಿಕ ಮೀನಾ, ಪ್ರಕಾಶ್ ರಾಜ್ ಮತ್ತು ಖುಷ್ಬೂ ಅವರು ರಜನಿಕಾಂತ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ. ರಜನಿ ಜೊತೆಗೆ ಮೀನಾ ನಟಿಸಿದ ಕೊನೆಯ ಚಿತ್ರ ‘ಕುಸೇಲನ್’. ಇದು ತೆರೆಕಂಡಿದ್ದು 2008ರಲ್ಲಿ.

1999ರಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರ ‘ಪಡಯಪ್ಪ’ದಲ್ಲಿ ಪ್ರಕಾಶ್ ರಾಜ್ ಅವರು ರಜನಿಕಾಂತ್ ಜೊತೆಗೆ ನಟಿಸಿದ್ದರು. ಇಪ್ಪತ್ತು ವರ್ಷದ ಬಳಿಕ ಮತ್ತೆ ಅವರು ಸೂಪರ್‌ಸ್ಟಾರ್ ಜೊತೆಗೆ ನಟಿಸಲು ಅಣಿಯಾಗುತ್ತಿದ್ದಾರೆ.

ಹಿರಿಯ ನಟಿ ಖುಷ್ಬೂ ಕೂಡ ಕೊನೆಯ ಬಾರಿಗೆ ನಟಿಸಿದ್ದು ರಜನಿ ಜೊತೆಗೆ ಅಭಿನಯಿಸಿದ್ದು 1992ರಲ್ಲಿ. ಆ ವರ್ಷ ಆಕೆ ರಜನಿ ಅವರೊಟ್ಟಿಗೆ ‘ಅಣ್ಣಮಲೈ’, ‘ಪಾಂಡಿಯನ್’ ಮತ್ತು ‘ಮನ್ನನ್’ ಚಿತ್ರದಲ್ಲಿ ಹೆಜ್ಜೆ ಹಾಕಿದ್ದರು.

‘ತಲೈವರ್ 168’ ಚಿತ್ರದ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ. ಆದರೆ, ರಜನಿಯ ಅಭಿಮಾನಿಗಳು ಇದಕ್ಕೆ ‘ಮನ್ನವನ್’ ಎಂದು ಹೆಸರಿಟ್ಟಿದ್ದಾರೆ. ಆದರೆ, ಸಿನಿಮಾ ನಿರ್ಮಾಣ ಸಂಸ್ಥೆಯು ‘ಅನ್ನಥ’ ಎಂಬ ಶೀರ್ಷಿಕೆ ಇಡಲು ನಿರ್ಧರಿಸಿದೆ. ಇದು ತಮಿಳಿನ ಆಡುಮಾತಿನ ಪದ. ‘ಹಿರಿಯಣ್ಣ’ ಎಂಬುದು ಇದರ ಅರ್ಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.