ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತಾಬ್–ರಜನಿಕಾಂತ್: ‘ತಲೈವಾ 170’ ಚಿತ್ರೀಕರಣ ಆರಂಭ

Published 25 ಅಕ್ಟೋಬರ್ 2023, 8:00 IST
Last Updated 25 ಅಕ್ಟೋಬರ್ 2023, 8:00 IST
ಅಕ್ಷರ ಗಾತ್ರ

ಚೆನ್ನೈ: ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್‌ನ ಬಿಗ್‌ಬಿ ಅಮಿತಾಬ್ ಬಚ್ಚನ್ ನಟಿಸುತ್ತಿರುವ ಚಿತ್ರದ ಶೂಟಿಂಗ್ ಚೆನ್ನೈನಲ್ಲಿ ಆರಂಭವಾಗಿದೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಟಿ.ಜೆ. ಜ್ಞಾನವೆಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

1991ರ ‘ಹಮ್’ ಚಿತ್ರದಲ್ಲಿ ಕೊನೆಯ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ 33 ವರ್ಷಗಳ ಮೂಲಕ ಮತ್ತೆ ತೆರೆ ಹಂಚಿಕೊಳ್ಳುತ್ತಿದೆ. ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗುತ್ತಿದ್ದು, ಸುಭಾಸ್ಕರನ್ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದ ಚಿತ್ರೀಕರಣ ಆರಂಭವಾಗಿರುವ ಮಾಹಿತಿಯನ್ನು ಅಮಿತಾಬ್ ಮತ್ತು ರಜನಿಕಾಂತ್, ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮೆಂಟರ್ ಅಮಿತಾಬ್ ಜೊತೆಗಿನ ಚಿತ್ರವನ್ನೂ ರಜನಿಕಾಂತ್ ಪೋಸ್ಟ್ ಮಾಡಿದ್ದಾರೆ.

‘33 ವರ್ಷಗಳ ಬಳಿಕ ಮತ್ತೆ ನನ್ನ ಮೆಂಟರ್ ಅಮಿತಾಬ್ ಬಚ್ಚನ್ ಅವರ ಜೊತೆ ಲೈಕಾ ಪ್ರೊಡಕ್ಷನ್‌ನ ಟಿ.ಜೆ. ಜ್ಞಾನವೆಲ್ ನಿರ್ದಶಿಸುತ್ತಿರುವ ‘ತಲೈವಾ 170’ಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಹೃದಯವು ಸಂತಸದಿಂದ ತುಂಬಿಹೋಗಿದೆ’ ಎಂದು ರಜನಿಕಾಂತ್ ಬರೆದುಕೊಂಡಿದ್ದಾರೆ.

ರಜನಿಕಾಂತ್ ಜೊತೆಗಿನ ತಮ್ಮ ಚಿತ್ರದ ಶೂಟಿಂಗ್ ಆರಂಭವಾಗುತ್ತಿದೆ ಎಂದು ಬೆಳ್ಳಂಬೆಳಿಗ್ಗೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

'ಇಂದು ರಜನಿಕಾಂತ್ ಜೀ .. ಅವರ ಜೊತೆಗಿನ ಹೊಸ ಪ್ರಾಜೆಕ್ಟ್ ಪ್ರಾರಂಭವಾಗಿದೆ. ಬಹಳ ವರ್ಷಗಳ ಬಳಿಕ ವೃತ್ತಿಪರ ವೇದಿಕೆಯಲ್ಲಿ ಒಟ್ಟಿಗೆ ಸೇರುತ್ತಿದ್ದೇವೆ’ ಎಂದು 81 ವರ್ಷದ ನಟ ಹೇಳಿದ್ದಾರೆ. ರಜನಿಕಾಂತ್ ಅವರನ್ನು ‘ಅಸಾಧಾರಣ ಮಾನವ’ ಎಂದು ಅಮಿತಾಬ್ ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT