ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜನಿಕಾಂತ್ ನಮಗೆ ದೇವರು: ತಲೈವಾಗಾಗಿ ದೇವಸ್ಥಾನ ಕಟ್ಟಿದ್ದ ಅಭಿಮಾನಿ

Published 2 ನವೆಂಬರ್ 2023, 2:21 IST
Last Updated 2 ನವೆಂಬರ್ 2023, 2:21 IST
ಅಕ್ಷರ ಗಾತ್ರ

ಚೆನ್ನೈ(ತಮಿಳುನಾಡು): ಅಪಾರ ಅಭಿಮಾನಿಗಳನ್ನು ಹೊಂದಿರುವ ಸೂಪರ್‌ಸ್ಟಾರ್‌ ರಜನಿಕಾಂತ್ ಅವರಿಗೆ ಅಭಿಮಾನಿಯೊಬ್ಬರಿಂದ ವಿಶೇಷ ಉಡುಗೊರೆ ಸಿಕ್ಕಿದೆ.

ಕಾರ್ತಿಕ್‌ ಎಂಬ ಅಭಿಮಾನಿ ತಮಿಳುನಾಡಿನ ಮಧುರೈನಲ್ಲಿರುವ ತಮ್ಮ ಮನೆಯ ಆವರಣದಲ್ಲಿ ತಲೈವಾಗೆ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಸ್ಥಾನದಲ್ಲಿ 250 ಕೆ.ಜಿ ತೂಕದ ರಜನಿಕಾಂತ್ ಅವರ ವಿಗ್ರಹವನ್ನು ನಿರ್ಮಿಸಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಭಿಮಾನಿ ಕಾರ್ತಿಕ್‌, 'ನಾನು ರಜನಿಕಾಂತ್ ಬಿಟ್ಟು ಬೇರೆ ಯಾವುದೇ ನಟರ ಸಿನಿಮಾ ನೋಡುವುದಿಲ್ಲ. ನಮಗೆ ಅವರೇ ದೇವರು. ಗೌರವದ ಸಂಕೇತವಾಗಿ ನಾನು ಅವರಿಗಾಗಿ ದೇವಾಲಯವನ್ನು ನಿರ್ಮಿಸಿದ್ದೇನೆ' ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT