ಸೋಮವಾರ, ಮಾರ್ಚ್ 8, 2021
27 °C

ಮಿಷನ್ ಫ್ರಂಟ್‌ಲೈನ್‌: ಬಿಎಸ್‌ಎಫ್‌ ಯೋಧನಾಗಿ ರಾನಾ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರ ಸಾಹಸ ಹಾಗೂ ಕಾರ್ಯವೈಖರಿಯನ್ನು ತೆರೆ ಮೇಲೆ ತೋರಿಸುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ ಡಿಸ್ಕವರಿ ಪ್ಲಸ್‌. ‘ಮಿಷನ್ ಫ್ರಂಟ್‌ಲೈನ್’ ಎಂಬ ಹೆಸರಿನ ಈ ಕಾರ್ಯ್ರಕಮದಲ್ಲಿ ರಾನಾ ದಗ್ಗುಬಾಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ಸಾಯಿ ಅಭಿಷೇಕ್ ಈ ಕಾರ್ಯಕ್ರಮದ ರೂವಾರಿಯಾಗಿದ್ದು ಟ್ರೇಲರ್ ಇಂದು ಬಿಡುಗಡೆಯಾಗಿದೆ. ಈ ಕಾರ್ಯಕ್ರಮವು ಜನವರಿ 21ರಂದು ಪ್ರಸಾರವಾಗಲಿದೆ.

ಟ್ರೇಲರ್‌ನಲ್ಲಿ ಬಿಎಸ್‌ಎಫ್ ಯೋಧನಾಗಿ ಕಾಣಿಸಿಕೊಂಡಿರುವ ರಾನಾ ತೆರೆ ಮೇಲೆ ಮಿಂಚಿದ್ದಾರೆ. ಬಿಎಸ್‌ಎಫ್ ಯೋಧರ ಸಂಪೂರ್ಣ ಜೀವನಶೈಲಿಯ ಮೇಲೆ ಕೇಂದ್ರೀಕರಿಸಲಾಗಿರುವ ಮಿಷನ್ ಫ್ರಂಟ್‌ಲೈನ್‌ನ ಕೆಲವೊಂದು ತುಣುಕುಗಳನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ಈ ಷೋಗಾಗಿ ರಾನಾ ಜೈಸಲ್ಮೇರ್‌ನಲ್ಲಿ ಯೋಧರೊಂದಿಗೆ ತಂಗಿದ್ದರು. ಜೊತೆಗೆ ಶಸ್ತ್ರಾಸ್ತ್ರಗಳನ್ನು ಬಳಸುವುದು, ಗುಂಡು ಹಾರಿಸುವುದು, ಒಂಟೆಯ ಮೇಲೆ ಗಸ್ತು ತಿರುಗುವುದು, ನುಸುಳುಕೋರರನ್ನು ಪತ್ತೆಹಚ್ಚುವುದು ಮುಂತಾದವುಗಳ ಕುರಿತು ಅಣುಕು ತರಬೇತಿಯನ್ನು ಪಡೆದಿದ್ದರು.

ಸೋಮವಾರ ‘ಝೂಮ್‌’ ಮೂಲಕ ಟ್ರೇಲರ್‌ ಬಿಡುಗಡೆ ಮಾಡಿದ ನಂತರ ಮಾತನಾಡಿದ ರಾನಾ ‘ಇದು ನನ್ನ ವೃತ್ತಿ ಹಾಗೂ ವೈಯಕ್ತಿಕ ಜೀವನಕ್ಕೆ ಸಿಕ್ಕ ಒಂದು ಅತ್ಯುತ್ತಮ ಅವಕಾಶ. ಯೋಧರೊಂದಿಗೆ ಕಳೆದ ಆ ಒಂದು ದಿನವನ್ನು ನಾನು ಎಂದಿಗೂ ಮರೆಯಲಾಗುವುದಿಲ್ಲ’ ಎಂದಿದ್ದಾರೆ.

‘ಯೋಧರ ಜೊತೆ ಕಳೆದ ದಿನ ತುಂಬಾ ಚೆನ್ನಾಗಿತ್ತು. ದೂರದಲ್ಲಿ ಕುಳಿತು ಅವರ ಸಾಹಸ ಹಾಗೂ ಕೆಲಸಗಳ ಬಗ್ಗೆ ಕೇಳಿಸಿಕೊಂಡು ಖುಷಿಪಡುತ್ತಿದ್ದ ನನಗೆ ನೇರವಾಗಿ ಅವರೊಂದಿಗೆ ಸಮಯ ಕಳೆಯಲು ಅವಕಾಶ ಸಿಕ್ಕಿತ್ತು. ಅವರೊಂದಿಗೆ ಅವರಂತೆಯೇ ಯೋಧನಾಗಿ ಕಳೆದ ಕ್ಷಣಗಳು ನಿಜಕ್ಕೂ ಅದ್ಭುತವಾಗಿತ್ತು. ನನಗೆ ಈ ಅವಕಾಶ ಸಿಗುವಂತೆ ಮಾಡಿದ್ದಕ್ಕೆ ಡಿಸ್ಕವರಿಗೆ ನಾನು ಧನ್ಯವಾದ ಹೇಳುತ್ತೇನೆ. ಗಡಿಯಲ್ಲಿರುವ ಯೋಧರ ಬಗ್ಗೆ ನೇರವಾಗಿ ಪ್ರೇಕ್ಷಕರಿಗೆ ತೋರಿಸುವ ಈ ಪ್ರಯತ್ನ ನಿಜಕ್ಕೂ ಉತ್ತಮವಾದದ್ದು. ಈ ಅವಕಾಶವೇ ತುಂಬಾ ಭಿನ್ನವಾಗಿದೆ. ಸಿನಿಮಾಕ್ಕಾಗಿ ನಾವು ಅವರ ಜೀವನವನ್ನು ಅಧ್ಯಯನ ಮಾಡುವುದೇ ಬೇರೆ, ಅವರೊಂದಿಗೆ ನೇರವಾಗಿ ಸಮಯ ಕಳೆದು ಅವರಂತೆಯೇ ದಿನವಿಡೀ ಇರುವುದೇ ಬೇರೆ. ಒಟ್ಟಾರೆ ಇದೊಂದು ಪಾಲಿಗೆ ಸಿಕ್ಕ ಅದೃಷ್ಟ ಎನ್ನಬಹುದು’ ಎಂದು ಅನುಭವ ಹಂಚಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಆಯೋಜಕರಾದ ಸಾಯಿ ಅಭಿಷೇಕ್‌ ‘ಡಿಸ್ಕವರಿಯಲ್ಲಿ ಮೊದಲಿನಿಂದಲೂ ಯೋಧರ ಬಗ್ಗೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆವು. ಆದರೆ ಅದಕ್ಕೂ ಮೀರಿದ್ದು ಏನಾನ್ನಾದರೂ ಮಾಡಬೇಕು ಎಂದುಕೊಂಡಾಗ ನಮಗೆ ಹೊಳೆದಿದ್ದು ಈ ಮಿಷನ್ ಫ್ರಂಟ್‌ಲೈನ್. ಅದಕ್ಕಾಗಿ ನಮಗೆ ಇದರಲ್ಲಿ ಒಲವು ಹೊಂದಿರುವ ಖ್ಯಾತನಾಮರೊಬ್ಬರು ಬೇಕಿದ್ದರು. ಅದಕ್ಕಾಗಿ ನಾವು ರಾನಾ ಅವರನ್ನು ಆಯ್ಕೆ ಮಾಡಿದ್ದೆವು. ಅವರು ಕೂಡ ನಮಗೆ ಖುಷಿಯಿಂದ ಒಪ್ಪಿಗೆ ನೀಡಿದ್ದರು. ಯೋಧರೊಂದಿಗೆ ಕಳೆದ ಆ ದಿನ ಅವರು ತುಂಬಾನೇ ವಿಷಯಗಳನ್ನು ಕಲಿತಿದ್ದಾರೆ’ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು