ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಶ್ಮಿಕಾ ಮಂದಣ್ಣ ವಿರುದ್ಧ ದೂರು

Last Updated 26 ಜುಲೈ 2019, 9:17 IST
ಅಕ್ಷರ ಗಾತ್ರ

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ನಟನೆಯ ಯಾವುದೇ ಚಿತ್ರಗಳನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡಬಾರದು ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟ ಒತ್ತಾಯಿಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಗುರುವಾರ ದೂರು ನೀಡಿತ್ತು.

‘ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದ ಬೆಳೆದಿದ್ದಾರೆ. ಕನ್ನಡತಿ ಮತ್ತು ಕನ್ನಡದ ನಟಿ ಎನ್ನುವ ಅಭಿಮಾನದಿಂದ ಕನ್ನಡ ಚಿತ್ರರಂಗದ ಪ್ರೇಕ್ಷಕರು ಅವರನ್ನು ಎತ್ತರಕ್ಕೆ ಬೆಳೆಸಿದ್ದಾರೆ. ಈಗ ಅವರು ಪರಭಾಷೆಗಳಲ್ಲಿ ಅವಕಾಶ ಗಿಟ್ಟಿಸುವ ಸಲುವಾಗಿ ತಮಿಳು ಮಾಧ್ಯಮದಲ್ಲಿ ಸಂದರ್ಶನ ನೀಡುವಾಗ ‘ನನಗೆ ಕನ್ನಡವೆಂದರೆ ಕಷ್ಟ. ಬೇರೆ ಎಲ್ಲಾ ಭಾಷೆಗಳು ತುಂಬಾ ಸರಳ’ ಎಂದು ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ಕೆರಳಿಸಿದ್ದಾರೆ. ಇದು ನಮ್ಮ ಭಾಷೆಗೆ ಅಗೌರವ ತೋರಿದಂತೆ. ರಶ್ಮಿಕಾ ಮಂದಣ್ಣಕನ್ನಡಿಗರು ಕೆರಳುವಂತೆ ಮಾಡಿದ್ದಾರೆ. ಅವರ ಅಭಿನಯದ ಚಿತ್ರಗಳನ್ನು ರಾಜ್ಯದಲ್ಲಿ ಬಿಡುಗಡೆ ಮಾಡಬಾರದು’ ಎಂದು ಒಕ್ಕೂಟದ ಅಧ್ಯಕ್ಷ ಕನ್ನಡ ಚಳವಳಿ ನಾಗೇಶ್‌, ಮಂಡಳಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದರು.

ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರಗಳನ್ನು ರಾಜ್ಯದಲ್ಲಿ ಬಿಡುಗಡೆ ಮಾಡಿದರೆ, ಕನ್ನಡ ಸಂಘಟನೆಗಳ ಒಕ್ಕೂಟ ಚಿತ್ರ ಪ್ರದರ್ಶನ ತಡೆದು, ಪ್ರತಿಭಟಿಸಲಿದೆ ಎಂದು ಎಚ್ಚರಿಕೆ ನೀಡಿದ್ದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಿ.ಆರ್‌.ಜೈರಾಜ್‌, ‘ತಮಿಳು ಮಾಧ್ಯಮಕ್ಕೆ ರಶ್ಮಿಕಾ ಮಂದಣ್ಣ ನೀಡಿರುವ ಸಂದರ್ಶನದ ವಿಡಿಯೋ ಪರಿಶೀಲನೆ ನಡೆಸಿದ್ದೇವೆ. ಕನ್ನಡ ಸೇರಿ ಯಾವುದೇ ಭಾಷೆಯಲ್ಲಿ ನನಗೆ ಡಬ್ಬಿಂಗ್‌ ಮಾಡುವುದು ಕಷ್ಟವೆಂದು ಹೇಳಿದ್ದಾರೆ. ನನಗೆ ಕನ್ನಡ ಕಷ್ಟವೆಂದು ಹೇಳಿಲ್ಲ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

'ಕನ್ನಡ ಚಿತ್ರರಂಗದ ಆಶೀರ್ವಾದ ಪಡೆದು, ಬೆಳೆದು ಪರಭಾಷೆಗೆ ಹೋಗಿ ಅಲ್ಲಿಯೂ ಬೆಳೆದ ಅನೇಕ ಸ್ನೇಹಿತರಿದ್ದಾರೆ! ಅವರೆಲ್ಲ ಇಂದು ಕನ್ನಡದಲ್ಲೇ ಮಾತಾಡಿ, ಕನ್ನಡವನ್ನ ಅಪಾರ ಗೌರವಿಸುತ್ತಾರೆ. ಅದು ಅವರ ಕನ್ನಡದ ಸಂಸ್ಕೃತಿ!ಆ ಗುಣವಿರದ ಇಂದಿನ ಪೀಳಿಗೆಯ ನಡಾವಳಿ ದುರದೃಷ್ಟಕರ ನಡೆ! ಕನ್ನಡ ಪ್ರೇಕ್ಷಕನ ಚಪ್ಪಾಳೆ ಬಿದ್ದೇ ನಿಮ್ಮ ಬೆಳವಣಿಗೆ ಆದದ್ದು ನೆನಪಿರಲಿ!' ಎಂದು ನಟ ಜಗ್ಗೇಶ್‌, ರಶ್ಮಿಕಾ ಮಂದಣ್ಣ ವಿರುದ್ಧ ಟ್ವಿಟರ್‌ನಲ್ಲಿ ಹರಿಹಾಯ್ದಿದ್ದರು.

ಡಿಯರ್‌ ಕಾಮ್ರೇಡ್‌ ಬಿಡುಗಡೆ

ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅಭಿನಯದ ಬಹುನಿರೀಕ್ಷೆಯ ‘ಡಿಯರ್‌ ಕಾಮ್ರೇಡ್‌‘ ಸಿನಿಮಾ ಇಂದು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳ ಭಾಷೆಗಳಲ್ಲಿ ತೆರೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT