ಶನಿವಾರ, ಜನವರಿ 29, 2022
19 °C

ನಾಗ ಚೈತನ್ಯರಿಂದ ಬೇರೆಯಾದ ನಂತರ ಸಾಯುತ್ತೇನೆಂದು ಭಾವಿಸಿದ್ದೆ: ಸಮಂತಾ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಟಾಲಿವುಡ್‌ ನಟ ನಾಗ ಚೈತನ್ಯರಿಂದ ಬೇರೆಯಾದ ನಂತರ ಕುಸಿದುಬಿದ್ದು ಸಾಯುತ್ತೇನೆಂದು ಭಾವಿಸಿದ್ದೆ ಎಂಬುದಾಗಿ ನಟಿ ಸಮಂತಾ ತಿಳಿಸಿದ್ದಾರೆ. 

ಈ ಕುರಿತು ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಅವರು, ‘ಬದುಕಿನಲ್ಲಿ ಬರುತ್ತಿರುವ ಎಲ್ಲಾ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುತ್ತೇನೆ. ನಾನಿಷ್ಟು ಬಲಶಾಲಿಯಾಗಿದ್ದೇನೆ ಎಂಬುದನ್ನು ತಿಳಿದು ನನಗೇ ಆಶ್ಚರ್ಯವಾಗಿದೆ‘ ಎಂದು ಹೇಳಿದ್ದಾರೆ.

ನಾಗ ಚೈತನ್ಯರಿಂದ ಬೇರೆಯಾದ ನಂತರ ಕುಸಿದುಬಿದ್ದು ಸಾಯುತ್ತೇನೆಂದು ಭಾವಿಸಿದ್ದೆ. ನನ್ನದು ದುರ್ಬಲ ವ್ಯಕ್ತಿತ್ವವೆಂದು ತಿಳಿದುಕೊಂಡಿದ್ದೆ. ಆದರೆ, ನಾನು ಇಷ್ಟೊಂದು ಬಲಶಾಲಿಯಾಗಿರುವುದರ ಬಗ್ಗೆ ನನಗೆ ಹೆಮ್ಮೆ ಇದೆ‘ ಎಂದು ಸಮಂತಾ ತಿಳಿಸಿದ್ದಾರೆ. 

ನಾಗ ಚೈತನ್ಯ ಹಾಗೂ ಸಮಂತಾ ಅವರ ದಾಂಪತ್ಯ ಜೀವನ ವಿಚ್ಚೇದನದಲ್ಲಿ ಅಂತ್ಯಗೊಂಡಿದೆ. 2017 ರಲ್ಲಿ ಅವರಿಬ್ಬರು ಮದುವೆಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು