ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 14ಕ್ಕೆ ‘ಕೋಟಿ’ ಬಿಡುಗಡೆ

Published 18 ಏಪ್ರಿಲ್ 2024, 23:55 IST
Last Updated 18 ಏಪ್ರಿಲ್ 2024, 23:55 IST
ಅಕ್ಷರ ಗಾತ್ರ

ನಟ ಧನಂಜಯ ನಾಯಕನಾಗಿ ನಟಿಸಿದ್ದ ‘ಗುರುದೇವ ಹೊಯ್ಸಳ’ ಸಿನಿಮಾ ಬಿಡುಗಡೆಯಾಗಿ ವರ್ಷ ಉರುಳಿದೆ. ಇದೀಗ ಧನಂಜಯ ನಟನೆಯ ‘ಕೋಟಿ’ ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಜೂನ್‌ 14ರಂದು ‘ಕೋಟಿ’ ಬಿಡುಗಡೆಯಾಗಲಿದೆ. 

ಪರಮೇಶ್ವರ್‌ ಗುಂಡ್ಕಲ್‌(ಪರಮ್‌) ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ‘ಕೋಟಿ’ ಕನಸು ಹೊತ್ತು ತೆರೆ ಮೇಲೆ ಬರಲಿದ್ದಾರೆ ಧನಂಜಯ. ಸಿನಿಮಾ ಕುರಿತು ಮಾತನಾಡಿದ ಧನಂಜಯ, ‘ಈ ಸಿನಿಮಾದ ಕಥೆ ಕೇಳಿ ಪ್ರತಿಯೊಬ್ಬರಲ್ಲೂ ‘ಕೋಟಿ’ ಕಾಣಿಸತೊಡಗಿದೆ. ಇದೊಂದು ಹೊಸ ಕಥೆ. ಈ ಸಿನಿಮಾಗೆ ಯಾವ ಉಲ್ಲೇಖಗಳೂ ಸಿಗುವುದಿಲ್ಲ. ಒಂದೇ ಒಂದು ಕೋಟಿ ಸಿಕ್ಕಿಬಿಟ್ಟರೆ ಅಥವಾ ದುಡಿಯೋದಕ್ಕಾದರೆ ಜೀವನದಲ್ಲಿ ಸೆಟ್ಲ್ ಆಗಿಬಿಡಬಹುದು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ನಮ್ಮ ‘ಕೋಟಿ’ಯೂ ಅಷ್ಟೇ. ಎಲ್ಲಾ ಮನೆಗಳಲ್ಲೂ ಈ ‘ಕೋಟಿ’ಯಂಥ ಅಣ್ಣ, ತಮ್ಮ, ಮಗ ನಿಮಗೆ ಸಿಗುತ್ತಾರೆ. ನಿಮ್ಮೊಳಗಿನ ‘ಕೋಟಿ’ಯನ್ನು ಪತ್ತೆ ಮಾಡಲು ಸಿನಿಮಾ ನೋಡಬೇಕು’ ಎಂದರು.

‘ಬಡವ ರಾಸ್ಕಲ್‌’ ಸಿನಿಮಾದ ಯಶಸ್ಸಿನಲ್ಲಿ ಪರಮ್‌ ಪಾಲಿದೆ. ನನಗೆ ಮೊದಲ ಕೋಟಿ ಕೊಟ್ಟಿದ್ದು ಕನ್ನಡದ ಜನರೇ. ‘ಬಡವ ರಾಸ್ಕಲ್‌’ ಗೆಲ್ಲಿಸಿದಾಗ’ ಎನ್ನುತ್ತಾರೆ ಧನಂಜಯ. 

‘ಕೋಟಿ’ಯಲ್ಲಿ ಧನಂಜಯಗೆ ಜೋಡಿಯಾಗಿ ಮೋಕ್ಷಾ ಕುಶಾಲ್ ನಟಿಸುತ್ತಿದ್ದಾರೆ. ಕೊಡಗಿನ ಮೋಕ್ಷಾ ಈ ಸಿನಿಮಾ ಮೂಲಕ ಚಂದನವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಮಿಂಚಿದ್ದ ರಮೇಶ್ ಇಂದಿರಾ ಈ ಸಿನಿಮಾದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದಾರೆ. ‘ಕೋಟಿ’ ಸಿನಿಮಾ ಡ್ರಾಮಾ ಥ್ರಿಲ್ಲರ್ ಎಳೆಯನ್ನು ಹೊಂದಿದೆ. ವಾಸುಕಿ ವೈಭವ್ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಮೂರು ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯವಿದ್ದು, ಒಂದು ಹಾಡನ್ನು ವಾಸುಕಿ ಬರೆದಿದ್ದಾರೆ. ನೊಬಿನ್ ಪೌಲ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ರಂಗಾಯಣ ರಘು, ತಾರಾ, ಪೃಥ್ವಿ ಶಾಮನೂರು, ಸರದಾರ ಸತ್ಯಾ ಮತ್ತು ತನುಜಾ ವೆಂಕಟೇಶ್ ತಾರಾಬಳಗದಲ್ಲಿದ್ದಾರೆ. 

ಮೋಕ್ಷಾ ಕುಶಾಲ್
ಮೋಕ್ಷಾ ಕುಶಾಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT