ಮಂಗಳವಾರ, ಡಿಸೆಂಬರ್ 6, 2022
24 °C

ಪ್ರಮೋದ್‌ ಶೆಟ್ಟಿ ಈಗ ‘ಶಭಾಷ್ ಬಡ್ಡಿಮಗ್ನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಲಾಫಿಂಗ್ ಬುದ್ದ’, ‘ಕಾಶಿಯಾತ್ರೆ’ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದ ಪ್ರಮೋದ್‌ ಶೆಟ್ಟಿ ಅವರ ಮೂರನೇ ಚಿತ್ರ ‘ಶಭಾಷ್ ಬಡ್ಡಿಮಗ್ನೆ’ ಸೆಟ್ಟೇರಿದೆ. ಸಿನಿಮಾದ ಮಹೂರ್ತ ಕಂಠೀರವ ಸ್ಟುಡಿಯೋದಲ್ಲಿ ವಿಜಯದಶಮಿಯಂದು ನಡೆಯಿತು. ನಟ ಅಜಯ್‌ರಾವ್ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು.

ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಹರೀಶ್‌ ಸಾ.ರಾ ಈ ‘...ಬಡ್ಡಿ ಮಗ್ನೆ’ಯ ನಿರ್ದೇಶಕರು. ಕಥೆ ಬಿ.ಎಸ್.ರಾಜಶೇಖರ್ ಅವರದ್ದು. ಚಿತ್ರರಂಗದಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿರುವ ಪ್ರಕಾಶ್ ಅವರು ಕಿಶನ್ ಪ್ರೊಡಕ್ಷನ್ ಹೆಸರಿನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

1980ರ ಕಾಲಘಟ್ಟದಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನಡೆದ ನೈಜ ಘಟನೆಯನ್ನು ತೆಗೆದುಕೊಂಡು ಚಿತ್ರಕಥೆ ಬರೆಯಲಾಗಿದೆ. ಅದಕ್ಕಾಗಿ ಆ ಭಾಗದಲ್ಲೆ 45 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಹಾಸ್ಯ, ಮರ್ಡರ್ ಮಿಸ್ಟ್ರಿ, ಥ್ರಿಲ್ಲರ್ ಅಂಶ ಈ ಚಿತ್ರದಲ್ಲಿದೆ. ಹಾಗೆಂದು ಚಿತ್ರದಲ್ಲಿ ಸಾಹಸ ದೃಶ್ಯಗಳು ಇಲ್ಲವಂತೆ. 

ತರಲೆ ಮಾಡುವ ಪೋಲೀಸ್ ಆಫೀಸರ್ ಪಾತ್ರದಲ್ಲಿ ಪ್ರಮೋದ್‌ ಶೆಟ್ಟಿ, ಪತ್ನಿಯಾಗಿ ಪ್ರಿಯಾ ನಾಯಕಿ. ಇವರೊಂದಿಗೆ ರಂಗಾಯಣ ರಘು, ರಾಹುಲ್, ರವಿತೇಜ, ಲಕ್ಷೀಪ್ರಿಯ ಸಾಹು, ಮನು, ಅಜಯ್, ಮಿತ್ರ, ರೂಪಾ, ಸುಧಾಮಣಿ, ಇಂದಿರಮ್ಮ, ಮಮತಾ ರಾಜಶೇಖರ್ ತಾರಾಬಳಗದಲ್ಲಿದ್ದಾರೆ. ಕಾರ್ತಿಕ್‌ ಭೂಪತಿ ಅವರು ಈ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಅಣಜಿ ನಾಗರಾಜ್, ಸಂಕಲನ ಪ್ರವೀಣ್‌ ಬೇಲೂರು ಅವರದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು