ಶನಿವಾರ, ಮೇ 8, 2021
21 °C

ಕಿಂಗ್‌ ಖಾನ್‌ ಶಾರೂಕ್‌ಗೆ 54ನೇ ಹುಟ್ಟು ಹಬ್ಬದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ನ ಬಾದ್ ಶಾ, ಕಿಂಗ್‌ ಖಾನ್‌ ಎಂದೇ ಖ್ಯಾತರಾಗಿರುವ ಶಾರೂಕ್‌ ಖಾನ್‌ ಅವರಿಗೆ ಇಂದು (ನವೆಂಬರ್‌ 2) 54 ನೇ ಹುಟ್ಟು ಹಬ್ಬದ ಸಂಭ್ರಮ.

ಶುಕ್ರವಾರ ತಡ ರಾತ್ರಿ ಶಾರೂಕ್‌ ಅವರ ನಿವಾಸ ಮುನ್ನತ್‌ ಎದುರು ಸಾವಿರಾರು ಅಭಿಮಾನಿಗಳು ಸೇರಿದ್ದರು. 1 ಗಂಟೆ ಸುಮಾರಿಗೆ ಮನೆಯ ಮಹಡಿಯ ಮೇಲೆ ಬಂದು ಅಭಿಮಾನಿಗಳತ್ತ ಕೈ ಬೀಸಿ ನಮಸ್ಕರಿಸಿದರು. ಈ ವೇಳೆ ಅಭಿಮಾನಿಗಳು ಹ್ಯಾಪಿಬರ್ತೆಡೆ ಶಾರೂಕ್‌ ಎಂದು ಕೂಗುತ್ತಿದ್ದರು.

ಶಾರೂಕ್‌ ನಿವಾಸದ ಸುತ್ತ ಮುತ್ತ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು. ಆಯ್ದ ಗಣ್ಯರಿಗೆ ಮಾತ್ರ ಅವರ ನಿವಾಸದ ಒಳಗೆ ಹೋಗಲು ಅವಕಾಶ ನೀಡಲಾಗಿತ್ತು. 

ಬೆಳಗಿನ ಜಾವ ಮನೆಯ ಮುಂಭಾಗದಲ್ಲಿ ಅಭಿಮಾನಿಗಳೊಂದಿಗೆ ಶಾರೂಕ್‌ ಸೆಲ್ಪಿ ತೆಗೆದುಕೊಂಡರು. 

ಶಾರೂಕ್‌ ಖಾನ್‌ ಅವರ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಬಾಲಿವುಡ್‌ ನಟ ನಟಿಯರು, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಉದ್ದಿಮೆದಾರರು ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಅಭಿಮಾನಿಗಳು ಜನ್ಮದಿನದ ಶುಭಾಶಯ ಕೋರಿದ್ದಾರೆ.

ಕಳೆದ ವರ್ಷ ಶಾರೂಕ್‌ ಅವರ ಜಿರೋ ಸಿನಿಮಾ ಬಿಡುಗಡೆಯಾಗಿತ್ತು. ಈ ವರ್ಷ ಅವರು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಸ್ಟಾರ್‌ ವರ್ಲ್ಡ್‌ನಲ್ಲಿ ಇಂದು ರಾತ್ರಿ ಟೆಡ್‌ ಟಾಕ್‌ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದೇ ವೇಳೆ ಹೊಸ ಸಿನಿಮಾ ಮಾಡುವ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಗಳಿವೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು