ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮ್ಯ ಕಲ್ಪನೆ, ವೈಜ್ಞಾನಿಕ ಕುತೂಹಲಗಳ ‘ಶೇಜಾಂ’

Last Updated 5 ಏಪ್ರಿಲ್ 2019, 5:40 IST
ಅಕ್ಷರ ಗಾತ್ರ

ಅತಿರಮ್ಯ ಕಲ್ಪನೆ ಮತ್ತು ವೈಜ್ಞಾನಿಕ ಕುತೂಹಲಗಳ ಸಮ್ಮಿಶ್ರಣದ ಕಥಾನಕಗಳು ಮಕ್ಕಳಿಗೆ ಇಷ್ಟ. ರಜತಪರದೆಯ ಮೇಲೆ ಕಾಮಿಕ್ಸ್‌ ರೂಪದ ಪಾತ್ರಗಳು ಜೀವಂತಿಕೆಯಿಂದ ಕಥಾ ಕುತೂಹಲ ಕಟ್ಟಿಕೊಡುವುದು ಅವರಿಗೆ ಪಂಚಪ್ರಾಣದ ಮನರಂಜನೆ.

ಬಿಲ್‌ ಪಾರ್ಕರ್‌ ಮತ್ತು ಸಿ.ಸಿ. ಬೆಕ್‌ ಅವರು ಫಾಸೆಟ್‌ ಕಾಮಿಕ್ಸ್‌ಗೆಂದು ರೂಪಿಸಿದ ಹೆಸರಾಂತ ಕಾಮಿಕ್ಸ್‌ ಕಥಾನಕ ಇದೀಗ ‘ಶೇಜಾಂ’ ಸಿನಿಮಾ ಆಗಿ (2019, ಏ.5) ಇಂದು ಬಿಡುಗಡೆಯಾಗುತ್ತಿದೆ.

ಸುಮಾರು ಮೂರು ಸಾವಿರ ವರ್ಷಗಳ ಹಿಂದಿನ ಮಾಯಾವಿ ಎಂದು ವ್ಹಿಜ್‌ ಕಾಮಿಕ್ಸ್‌#2 ನಲ್ಲಿ ಬಣ್ಣಿಸಿದ ಮಾಯಾವಿಯಂಥ ಒಂದು ಅದ್ಭುತ ಮನರಂಜನೆಯ ಕಥಾನಕವಿದು. ಯಂಗ್‌ ಬಿಲಿ ಬ್ಯಾಟ್ಸನ್‌ಗೆ ಸೂಪರ್‌ ಹೀರೋ ಕ್ಯಾಪ್ಟನ್‌ ಮಾರ್ವೆಲ್‌ ಆಗಿ ಪರಿವರ್ತನೆ ಹೊಂದುವ ಮಾಯಾವಿ ಗುಣ ತುಂಬಿದ ಒಂದು ಕುತೂಹಲಕರ ಪಾತ್ರ ಚಿತ್ರಣ. ಡಿ.ಸಿ. ಕಾಮಿಕ್ಸ್‌ ಈ ಕ್ಯಾಪ್ಟನ್‌ ಮಾರ್ವೆಲ್‌ನ ಸಾಹಸಗಳನ್ನು ‘ಶೇಜಾಂ’ ಎನ್ನುವ ಶೀರ್ಷಿಕೆಯಡಿ ಬಣ್ಣಿಸಿದ್ದು 1973ರಲ್ಲಿ.

‘ಶೇಜಾಂ’ ಹೆಸರಿನಲ್ಲಿಯೇ ಅಮೆರಿಕದ ಸೂಪರ್‌ ಹೀರೋ ಸಿನಿಮಾ ಆಗಿ ಇದೀಗ ವಿಶ್ವದಾದ್ಯಂತ ಮಿಂಚಲಿದೆ. ನ್ಯೂ ಲೈನ್‌ ಸಿನಿಮಾ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರದ ವಿತರಣೆ ಮಾಡಿದ್ದು ಹೆಸರಾಂತ ಬ್ಯಾನರ್‌ ವಾರ್ನರ್‌ ಬ್ರದರ್ಸ್‌. ಡೇವಿಡ್‌ ಎಫ್‌. ಸ್ಯಾಂಡ್‌ಬರ್ಗ್‌ ಈ ಚಿತ್ರದ ನಿರ್ದೇಶಕ.

ಚಿತ್ರಕತೆ: ಹೆನ್ರೀ ಗೆಡೆನ್‌, ಕತೆ: ಗೇಡನ್‌ ಮತ್ತು ಡೆರೇನ್‌ ಲೆಮ್ಕೀ.

ತಾರಾಗಣ: ಅಶರ್‌ ಎಂಜಿಲ್‌ ಬಿಲಿ ಬ್ಯಾಟ್ಸನ್‌ ಆಗಿ, ಒಬ್ಬ ಹದಿಹರೆಯದ ಬಾಲಕ ಸೂಪರ್‌ ಹೀರೊ ಆಗಿ ಪರಿವರ್ತನೆ ಹೊಂದುವ ಪಾತ್ರವನ್ನು ಜೆಷ್ರಿ ಲೆವೈ ಮತ್ತು ಮಾರ್ಕ್‌ ಸ್ಟ್ರಾಂಗ್‌, ಜಾಕ್‌ ಡೈಲನ್‌ ಗ್ರೇಜರ್‌ ಮತ್ತು ಜಿಮೂನ್‌ ಹೌನ್ಸೌ ಮತ್ತಿತರ ಹೆಸರಾಂತ ನಟರು.
ಕಾಮಿಕ್ಸ್‌ ಲೋಕದ ಕ್ಯಾಪ್ಟನ್‌ ಮಾರ್ವೆಲ್‌ ಸಾಹಸಗಳ ಬಗ್ಗೆ 1941ರ ನಂತರ ಬರುತ್ತಿರುವ ಮೊದಲ ಚಿತ್ರ ಇದಾಗಿದೆ. ಈ ಸಾಹಸಮಯ ಸಿನಿಮಾ ತಯಾರಿ 2000ರಿಂದಲೇ ಶುರುವಾಗಿತ್ತು. ಹಲವು ಕಾರಣಗಳಿಂದ ಯೋಜನೆ ವಿಳಂಬವಾಗಿತ್ತು. 2008ರಲ್ಲಿ ಬೇರೊಬ್ಬ ನಿರ್ದೇಶಕ, ಬರಹಗಾರರು ಮತ್ತು ನಟರನ್ನು ಈ ಯೋಜನೆಗೆ ನಿಯೋಜಿಸಲಾಗಿತ್ತು. ಆದರೆ ಅಂತಿಮವಾಗಿ ಅದೆಲ್ಲ ಬದಲಾಗಿ 2014ರಲ್ಲಿ ‘ಶೇಜಾಂ’ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಸ್ಯಾಂಡ್‌ಬರ್ಗ್‌ ನಿರ್ದೇಶನದ ಜವಾಬ್ದಾರಿ ಹೊತ್ತು 2017ರಲ್ಲಿ ಸಹಿ ಹಾಕಿದರು. ಚಿತ್ರದ ಪ್ರಧಾನ ಫೊಟೊಗ್ರಫಿ ಕಾರ್ಯ ಶುರುವಾಗಿದ್ದು 2018, ಜ. 29ರಂದು. ಟೊರೊಂಟೊ, ಒಂಟಾರಿಯೊ, ಕೆನಡಾದಲ್ಲಿ ಭರ್ಜರಿ ಚಿತ್ರೀಕರಣ ನಡೆಯಿತು. ಚಿತ್ರದ ಬಹುತೇಕ ಭಾಗ ಟೊರೊಂಟೊದ ಪೈನ್‌ವುಡ್‌ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡಿದೆ, 2018ರ ಮೇ ತಿಂಗಳಲ್ಲಿ ಚಿತ್ರ ಪೂರ್ಣಗೊಂಡಿತ್ತು. ಇದೀಗ ‘ಶೇಜಾಂ’ ಭಾರತದ ಹಲವಾರು ಸಿನಿಮಾ ಥಿಯೇಟರ್‌ಗಳಿಗೆ ಬಿಡುಗಡೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT