ಶ್ರುತಿ ಈಗ ಇನ್ನಷ್ಟು ಚ್ಯೂಸಿ

7
‘ಟೆಸ್ಲಾ’ ಚಿತ್ರದ ತಯಾರಿಯಲ್ಲಿ ಬ್ಯುಸಿ

ಶ್ರುತಿ ಈಗ ಇನ್ನಷ್ಟು ಚ್ಯೂಸಿ

Published:
Updated:
ಶ್ರುತಿ ಹರಿಹರನ್

ಕನ್ನಡದ ಬಹುಬೇಡಿಕೆಯ ನಟಿಯರಲ್ಲಿ ಶ್ರುತಿ ಹರಿಹರನ್ ಕೂಡ ಒಬ್ಬರು. ಹೊಸಬರ ಪ್ರಯತ್ನಗಳಿಗೂ, ಸ್ಟಾರ್ ನಟರ ಜತೆಗೂ ನಟಿಸುತ್ತಲೇ ಜನರ ಮನಸ್ಸನ್ನು ಗೆದ್ದಿದ್ದ ಶ್ರುತಿ ಹರಿಹರನ್ ಕೈಯಲ್ಲಿ ಹೊಸತಾಗಿ ಯಾವ ಸಿನಿಮಾ ಕೂಡ ಇಲ್ಲ. ಶ್ರುತಿ ಅವರಿಗೇ ಅವಕಾಶಗಳಿಗೆ ಬರ ಬಂದಿದೆಯೇ? ಖಂಡಿತ ಇಲ್ಲ. ಬಂದ ಅವಕಾಶಗಳನ್ನೆಲ್ಲ ಅವರು ಒಪ್ಪಿಕೊಳ್ಳುತ್ತಿಲ್ಲ ಅಷ್ಟೆ.

ಹೌದು, ಶ್ರುತಿ ಇನ್ನಷ್ಟು ಚ್ಯೂಸಿಯಾಗಿದ್ದಾರೆ. ಹಾಗೆಂದು ಅವರೇ ಹೇಳಿಕೊಳ್ಳುತ್ತಾರೆ. ‘ಮಾಡಿದರೆ ಒಳ್ಳೆಯ ಸಿನಿಮಾಗಳನ್ನೇ ಮಾಡಬೇಕು ಎಂದು ನಾನು ನಿರ್ಧರಿಸಿದ್ದೇನೆ. ಹಾಗಾಗಿಯೇ ಸದ್ಯಕ್ಕೆ ಒಂದು ಬ್ರೇಕ್ ತೆಗೆದುಕೊಂಡಿದ್ದೇನೆ’ ಎನ್ನುವುದು ಅವರ ಅಂಬೋಣ. ‘ತುಂಬ ಆಸಕ್ತಿ ಹುಟ್ಟಿಸುವಂಥ ಪಾತ್ರಗಳು ಬರುತ್ತಿಲ್ಲ. ಆಸಕ್ತಿದಾಯಕ ಪಾತ್ರ ಸಿಕ್ಕದೆ ನಾನು ನಟಿಸುವುದಿಲ್ಲ. ಹಾಗಾಗಿ ಯಾವ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ. ಆದಷ್ಟು ಬೇಗ ಒಂದು ಒಳ್ಳೆಯ ಅವಕಾಶ ಸಿಗುತ್ತದೆ, ನಾನು ಅದನ್ನು ಒಪ್ಪಿಕೊಂಡು ನಟಿಸುತ್ತೇನೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಶ್ರುತಿ.

ಈಗಷ್ಟೇ ಅವರು ನಾಯಕಿಯಾಗಿ ನಟಿಸಿರುವ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಚಿತ್ರೀಕರಣವನ್ನು ಅವರು ಮುಗಿಸಿದ್ದಾರೆ. ಹಾಗೆಯೇ ಅವರ ಮಹತ್ವಾಕಾಂಕ್ಷೆಯ ಚಿತ್ರ ‘ಟೆಸ್ಲಾ’, ಚಿತ್ರಕಥೆಯ ಹಂತದಲ್ಲಿದೆ. ಈ ಚಿತ್ರಕ್ಕೆ ಶ್ರುತಿ ಕೂಡ ಸಹಬರವಣಿಗೆ ಮಾಡುತ್ತಿದ್ದಾರೆ ಎನ್ನುವುದು ವಿಶೇಷ. 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !