ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಟ್‌ಸ್ಟಾರ್‌ನಲ್ಲಿ ‘ಸ್ಪೆಷಲ್ ಆಪ್ಸ್‌’

Last Updated 1 ಮಾರ್ಚ್ 2020, 13:33 IST
ಅಕ್ಷರ ಗಾತ್ರ

‘2020ರ ಅತಿದೊಡ್ಡ ಆ್ಯಕ್ಷನ್‌, ಥ್ರಿಲ್ಲರ್ ವೆಬ್ ಸರಣಿ’ ಹಾಟ್‌ಸ್ಟಾರ್‌ನಲ್ಲಿ ಮಾರ್ಚ್‌ 17ರಂದು ಪ್ರಸಾರ ಆಗಲಿದೆ. ಭಾರತದಲ್ಲಿ ನಡೆದ ಕೆಲವು ಭಯೋತ್ಪಾದಕ ದಾಳಿಗಳ ಹಿಂದಿನ ಮಾಸ್ಟರ್‌ ಮೈಂಡ್‌ ಭಯೋತ್ಪಾದಕನನ್ನು ಪತ್ತೆ ಮಾಡುವುದರ ಕಥೆ ಎಂಟು ಕಂತುಗಳ ‘ಸ್ಪೆಷಲ್ ಆಪ್ಸ್’ ಹೆಸರಿನ ಈ ಸರಣಿಯಲ್ಲಿ ಇರಲಿದೆ.

‘ಈ ಕಥೆಯು 19 ವರ್ಷಗಳನ್ನು, 12 ದೇಶಗಳನ್ನು ವ್ಯಾಪಿಸಿಕೊಂಡಿದೆ. ಗುಪ್ತದಳದ ಆರು ಜನ ಏಜೆಂಟರು, ಒಬ್ಬ ಮಾಸ್ಟರ್‌ಮೈಂಡ್‌ ಈ ಕಥೆಯ ಕೇಂದ್ರದಲ್ಲಿ ಇರುತ್ತಾರೆ. 2001ರಲ್ಲಿ ದೇಶದ ಸಂಸತ್ತಿನ ಮೇಲೆ ನಡೆದ ದಾಳಿಯಿಂದ ಕಥೆ ಆರಂಭವಾಗುತ್ತದೆ’ ಎಂದು ಹಾಟ್‌ಸ್ಟಾರ್‌ ಹೇಳಿದೆ.

ಈ ಸರಣಿಯಲ್ಲಿ ಕಾಣುವ ದಾಳಿಗಳು ನೈಜ. ಆದರೆ ಹೆಣೆದಿರುವ ಕಥೆ ಕಾಲ್ಪನಿಕ. ಮುಂಬೈ, ಕಾಶ್ಮೀರದಲ್ಲಿ ನಡೆಯುವ ದಾಳಿಗಳೂ ಈ ಕಥೆಯ ಭಾಗ. ‘ಭಾರತದ ಅತ್ಯಂತ ಅಪಾಯಕಾರಿ ಶತ್ರುವಿಗಾಗಿ ದೇಶದ ಗುಪ್ತದಳ ನಡೆಸುವ ಅತ್ಯಂತ ಸುದೀರ್ಘ ಅವಧಿಯ ಹುಡುಕಾಟದ ಕಥೆ ಇದು’ ಎಂಬುದು ಹಾಟ್‌ಸ್ಟಾರ್‌ ನೀಡಿರುವ ವಿವರಣೆ. ಈ ಸರಣಿಯ ಕಥೆ ನೀರಜ್ ಪಾಂಡೆ, ದೀಪಕ್ ಕಿಂಗ್ರಾನಿ ಮತ್ತು ಬೆನಜೀರ್ ಅಲಿ ಫಿದಾ ಅವರದ್ದು. ಇವರು ಭಾರತದ ಗುಪ್ತದಳದ ಕಾರ್ಯವನ್ನು ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರಂತೆ. ಈ ಸರಣಿಯು ವೀಕ್ಷಕರಿಗೆ ಸಿಕ್ಕಾಪಟ್ಟೆ ಥ್ರಿಲ್ ನೀಡಲಿದೆ ಎಂದೂ ಹಾಟ್‌ಸ್ಟಾರ್‌ ಹೇಳಿದೆ. ಸರಣಿಯನ್ನು ಟರ್ಕಿ, ಅಜಬೈಜಾನ್, ಜೋರ್ಡಾನ್‌ನಲ್ಲಿ ಕೂಡ ಚಿತ್ರೀಕರಿಸಲಾಗಿದೆ.

ಇಡೀ ಸರಣಿಯು ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT