ನಟ ಉಪೇಂದ್ರ ತೆರೆ ಮೇಲೆ ಕಾಣಿಸಿಕೊಂಡು ಮೂರು ವರ್ಷವಾಗುತ್ತಾ ಬಂದಿದೆ. ‘ಐ ಲವ್ ಯು’ ಸಿನಿಮಾ ಬಳಿಕ ಇದೀಗ ‘ಹೋಮ್ ಮಿನಿಸ್ಟರ್’ ಆಗಿ ಉಪೇಂದ್ರ ಏ.1ರಂದು ಅಧಿಕಾರವಹಿಸಿಕೊಳ್ಳಲಿದ್ದಾರೆ! ಈ ಚಿತ್ರದಲ್ಲಿ ಹೊಸ ಅವತಾರದಲ್ಲೂ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ.

ಸುಮಾರು ಎರಡು ವರ್ಷಗಳ ಹಿಂದೆಯೇ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರದ ‘ಹೋಮ್ ಮಿನಿಸ್ಟರ್’ ಸೆಟ್ಟೇರಿತ್ತು. ಚಿತ್ರದಲ್ಲಿನ ತಮ್ಮ ಹೊಸ ಗೆಟ್‌ಅಪ್ ಅನ್ನೇ ಇದೀಗ ಉಪೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣದ ಫೊಟೊವಾಗಿ ಹಾಕಿಕೊಂಡಿದ್ದಾರೆ. ಅಭಿಮಾನಿಗಳು ಉಪೇಂದ್ರ ಅವರ ಈ ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ. ಹಲವು ಅಭಿಪ್ರಾಯಗಳನ್ನೂ ಅಭಿಮಾನಿಗಳು ಹಂಚಿಕೊಂಡಿದ್ದಾರೆ.

ನಟರಾದ ಗೋಲ್ಡನ್ ಸ್ಟಾರ್ ಗಣೇಶ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ನಿರಂಜನ್ ಸುಧೀಂದ್ರ, ನಟಿ ಪ್ರಿಯಾಂಕ ಉಪೇಂದ್ರ ಸಮ್ಮುಖದಲ್ಲಿ ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದೆವು. ‘ಕೋವಿಡ್ ಪೂರ್ವದಲ್ಲಿ ನಮ್ಮ ಚಿತ್ರ ಆರಂಭವಾಯಿತು. ಚಿತ್ರದ ಕಥೆ ಕೇಳಿದಾಗ ನನಗೆ ಒಂದು ಕಡೆ ಭಯವಿತ್ತು. ಈ ಪಾತ್ರವನ್ನು ಮಾಡಬಲ್ಲೆನೇ ಎನ್ನುವ ಸಂದೇಹವಿತ್ತು. ಜನ ಈ ಕಥೆಯನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆಯೋ ಎಂದು ತಿಳಿದಿಲ್ಲ. ಕೊನೆಗೆ ನಿರ್ಮಾಪಕ ಪೂರ್ಣಚಂದ್ರ ನಾಯ್ಡು ಅವರು ಭರವಸೆ ತುಂಬಿದರು’ ಎಂದು ಉಪೇಂದ್ರ ನೆನಪಿಸಿಕೊಂಡರು.

ಸುಜಯ್ ಕೆ. ಶ್ರೀಹರಿ ನಿರ್ದೇಶಿಸಿರುವ ಈ ಚಿತ್ರದ ನಾಯಕಿಯಾಗಿ ವೇದಿಕ ನಟಿಸಿದ್ದು, ತಾನ್ಯ ಹೋಪ್, ಚಾಂದಿನಿ, ಸುಮನ್ ರಂಗನಾಥ್, ಸಾಧುಕೋಕಿಲ, ಶ್ರೀನಿವಾಸ ಮೂರ್ತಿ, ಸುಧಾ ಬೆಳವಾಡಿ, ತಿಲಕ್, ಅವಿನಾಶ್, ಮಾಳವಿಕ ಅವಿನಾಶ್, ಲಾಸ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.