ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಮಹತ್ವ ಸಾರುವ ‘ದಿ ರೂಲರ್ಸ್‌’ ಚಿತ್ರದ ಟ್ರೇಲರ್‌ ಬಿಡುಗಡೆ

Published 19 ಮಾರ್ಚ್ 2024, 10:52 IST
Last Updated 19 ಮಾರ್ಚ್ 2024, 10:52 IST
ಅಕ್ಷರ ಗಾತ್ರ

ಸಂವಿಧಾನದ ಮಹತ್ವ ಸಾರುವ ‘ದಿ ರೂಲರ್ಸ್‌’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್‌ ಟ್ರೇಲರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. 

ಎಂ.ಸಂದೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಉದಯ್ ಭಾಸ್ಕರ್‌ ಆ್ಯಕ್ಷನ್‌ ಕಟ್ ಹೇಳಿರುವ ಚಿತ್ರಕ್ಕೆ ಅಶ್ವತ್ಥ್‌ ಬಳಗೆರೆ ಬಂಡವಾಳ ಹೂಡಿದ್ದಾರೆ. ಚಿತ್ರ ಶೀಘ್ರದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. 

‘ವರ್ಷಕ್ಕೆ ಇನ್ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳು ಸಿದ್ಧವಾಗುತ್ತವೆ. ಆದರೆ ಈ ಚಿತ್ರ ತುಂಬ ವಿಶೇಷವಾಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಹಾಗೂ ಹೋರಾಟದ ಮನೋಭಾವನೆಯನ್ನು ಇದರಲ್ಲಿ ತೋರಿಸಲಾಗಿದೆ. ಇಂತಹ ಚಿತ್ರವನ್ನು ಶಾಲಾ ಕಾಲೇಜುಗಳ ಮಕ್ಕಳು ನೋಡುವುದರಿಂದ ತಿಳಿವಳಿಕೆ, ಜ್ಞಾನ ಹೆಚ್ಚುತ್ತದೆ’ ಎಂದರು ನಾಗೇಂದ್ರ ಪ್ರಸಾದ್‌.

ಕರುಣ್ ಕೆ.ಜಿ.ಎಫ್ ಸಂಗೀತ ಸಂಯೋಜಿಸಿದ್ದು, ವಿಶಾಲ್, ರಿತಿಕಾ ಗೌಡ, ಪುನೀತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT