ಭಾನುವಾರ, ಆಗಸ್ಟ್ 25, 2019
20 °C

ಮಕ್ಕಳಿಗಾಗಿ ಶೌಚಾಲಯ ಕಟ್ಟಿಸಿದ ಭೂಮಿ

Published:
Updated:
Prajavani

ಭೂಮಿ ಪೆಡ್ನೇಕರ್ ಹಾಗೂ ಅಕ್ಷಯ್‌ ಕುಮಾರ್ ನಟನೆಯ ‘ಟಾಯ್ಲೆಟ್‌: ಏಕ್‌ ಪ್ರೇಮ್‌ ಕಥಾ’ ಸಿನಿಮಾ ಬಿಡುಗಡೆಯಾಗಿ ಎರಡು ವರ್ಷಗಳಾಗಿವೆ.

ಈ ವಿಷಯವನ್ನು ನಟಿ ಭೂಮಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ನನಗೆ ಇದು ಕೇವಲ ಸಿನಿಮಾ ಮಾತ್ರ ಅಲ್ಲ. ಅದಕ್ಕಿಂತ ಹೆಚ್ಚು’ ಎಂದು ಬರೆದುಕೊಂಡಿರುವ ಅವರು, ಒಳ್ಳೆಯ ಉದ್ದೇಶ ಇರುವ ಸಿನಿಮಾವೊಂದರ ಭಾಗವಾಗಿದ್ದು ನನ್ನ ಪುಣ್ಯ’ ಎಂದು ಟ್ವೀಟ್ ಮಾಡಿದ್ದಾರೆ.

ಚಂಬಲ್‌ ಜಿಲ್ಲೆಯ ಅಭ್ಯುದಯ ಆಶ್ರಮದ ಮಕ್ಕಳಿಗಾಗಿ ಅತ್ಯುತ್ತಮ ಶೌಚಾಲಯವನ್ನು ಕಟ್ಟಿಸಿರುವ ಅವರು ತಮ್ಮ ಸಿನಿಮಾದ ಎರಡನೇ ವರ್ಷದ ಸಂಭ್ರಮದ ವೇಳೆಯೇ ಟಾಯ್ಲೆಟ್‌ ಉದ್ಘಾಟಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ.

ಆಶ್ರಮದ ವಿದ್ಯಾರ್ಥಿನಿಯರೊಂದಿಗೆ ಭೂಮಿ, ಟಾಯ್ಲೆಟ್‌ ಮುಂದೆ ನಿಂತಿರುವ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ‘ಈ ಸಿನಿಮಾ ಸಾಕಷ್ಟು ಜಾಗೃತಿಯನ್ನು ಮೂಡಿಸಿತ್ತು. ಸಿನಿಮಾ ಯಶಸ್ವಿಯಾದ ಬಳಿಕವೂ ನನಗೆ ಮೂಲಸೌಕರ್ಯ ಇಲ್ಲದೆ ನರಳುವ ಮಕ್ಕಳಿಗಾಗಿ ಏನಾದರೂ ಮಾಡುವ ಹಂಬಲ ಉಳಿದುಕೊಂಡಿದೆ’ ಎಂದು ಬರೆದಿದ್ದಾರೆ.

Post Comments (+)