ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಗಳ ಮಮಕಾರದಲ್ಲಿ ರಾಮಚರಣ್

Published 22 ಜೂನ್ 2024, 5:31 IST
Last Updated 22 ಜೂನ್ 2024, 5:31 IST
ಅಕ್ಷರ ಗಾತ್ರ

ಅಯ್ಯೋ ಮೊದಲೆಲ್ಲ ನನಗೆ ಮಗುವಿನ ಜೊತೆಗೆ ಯಾವ ಬಾಂಧವ್ಯವೂ ಬೆಸೆದಿರಲಿಲ್ಲ. ಇದೊಂದು ಜವಾಬ್ದಾರಿ ಎಂಬುದು ಮಾತ್ರ ಪ್ರಜ್ಞೆಯಲ್ಲಿತ್ತು. ಆದರೆ ಆರು ತಿಂಗಳು ಕಳೆದ ಬಳಿಕ ಅವಳೀಗ ಎಲ್ಲರನ್ನೂ ಗುರುತಿಸುತ್ತಿದ್ದಾಳೆ. ನನ್ನ ನೋಡಿ ಖುಷಿ ಪಡುವಾಗ ಅವಳೇ ಜಗತ್ತಾಗಿ ಬದಲಾದಳು‘ ಹೀಗೆ ರಾಮಚರಣ್‌ ತಮ್ಮ ಮಗಳು ಕ್ಲಿನ್‌ ಕಾರಾ ಬಗ್ಗೆ ಹೇಳಿಕೊಂಡಿದ್ದಾರೆ.

ಉಪಾಸನಾ ಮತ್ತು ಕ್ಲಿನ್‌ ಪ್ರೀತಿ ನೋಡಿದಾಗ ನನಗೆ ಮೊದಮೊದಲು ಗಾಬರಿಯಾಗುತ್ತಿತ್ತು. ನನ್ನೊಟ್ಟಿಗೆ ಯಾಕೆ ಇಂಥ ಬಂಧವಿಲ್ಲ ಅಂತನಿಸುತ್ತಿತ್ತು. ಅವರಿಬ್ಬರ ಬಾಂಧವ್ಯ ನೋಡಿದಾಗ, ನಾನು ಇವರಿಬ್ಬರ ಪರಿಧಿಯಿಂದಾಚೆಯೇ ಉಳಿದೆನೆ ಎಂಬ ಆತಂಕವೂ ಕಾಡತೊಡಗಿತ್ತು. ಮತ್ತೆ ನನ್ನ ಸ್ನೇಹಿತನೊಡನೆ ಈ ವಿಷಯ ಚರ್ಚಿಸಿದಾಗ, ಇದು ಸಹಜ ಅಂತ ಹೇಳಿದರು. ಅಷ್ಟೇ ಅಲ್ಲ, ಅವರು ಒಂದು ವರ್ಷದವರೆಗೂ ಮಗುವಿನೊಂದಿಗೆ ಬಾಂಧವ್ಯ ಬೆಸೆಯಲು ಆಗಿರಲಿಲ್ಲ ಎಂದೂ ಹೇಳಿದರು. 

ಇದೀಗ ಮಗಳು ನನ್ನ ನೋಡಿ, ಗುರುತಿಸಿ ನಗುವಾಗ, ಹೊಸದನ್ನು ಕಲಿಯುವಾಗ, ಒಂದೊಂದೇ ತುತ್ತು ಉಣ್ಣುವಾಗಲೆಲ್ಲ.. ನನಗೆ ಈ ಮಗುವೇ ಪ್ರಪಂಚವಾಗಿ ಬದಲಾಗಿದೆ. ಏನೇ ಆದರೂ ಕ್ಲಿನ್‌ಗೆ ಎರಡು ಹೊತ್ತು ಊಟ ಮಾಡಿಸುವುದು ಮಾತ್ರ ನನ್ನದೇ ಕೆಲಸವಾಗಿದೆ.  ನನ್ನ ಹೆಂಡತಿ ಉಪಾಸನಾ ಸಹ ಅತ್ಯುತ್ತಮ ಪೇರೆಂಟ್‌. ಆದರೆ ಊಟದ ವಿಷಯ ಬಂದಾಗ, ನನ್ನಂತೆ ಯಾರೂ ಮಾಡಿಸಲಾರರು ಎಂಬುದನ್ನು ಮಾತ್ರ ಹೆಮ್ಮೆಯಿಂದ ಹೇಳಬಲ್ಲೆ. ಒಂದು ಪೂರ್ತಿ ಬಟ್ಟಲು ಊಟವನ್ನೂ ನಾನು ಖಾಲಿ ಮಾಡಿಸಬಲ್ಲೆ. ಅದು ನನ್ನ ಶಕ್ತಿ ಎಂದೂ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಈಚೆಗಷ್ಟೆ  ಉಪಾಸನಾ ಕಾಮಿನೆನಿ ಅವರೊಂದಿಗೆ ಮದುವೆಯ ಹನ್ನೆರಡನೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ರಾಮಚರಣ್‌ ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿವರಗಳನ್ನು ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT