ಲಾಸ್ ಏಂಜಲೀಸ್: ಅಮೆರಿಕದ ನಟ ಟ್ರಾಯ್ ಕೊಟ್ಸುರ್ ಅವರು 'ಕೊಡ' (CODA) ಚಿತ್ರದಲ್ಲಿನ ತಮ್ಮ ಮನೋಜ್ಞ ಅಭಿನಯಕ್ಕಾಗಿ 2022ನೇ ಸಾಲಿನ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದರೊಂದಿಗೆ ಈ ಪ್ರಶಸ್ತಿ ಗಳಿಸಿದ ಎರಡನೇ ಕಿವುಡ ಕಲಾವಿದ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ.
ಅಮೆರಿಕದವರೇ ಆದ ನಟಿ ಮರ್ಲೀ ಮ್ಯಾಟ್ಲಿನ್ ಅವರು 'ಚಿಲ್ಡ್ರನ್ ಆಫ್ ಎ ಲೆಸ್ಸರ್ ಗಾಡ್' ಚಿತ್ರದಲ್ಲಿನ ನಟನೆಗಾಗಿ 35 ವರ್ಷಗಳ ಹಿಂದೆ (1986ರಲ್ಲಿ) ಈ ಪ್ರಶಸ್ತಿ ಪಡೆದಿದ್ದರು.
ಕೊಟ್ಸುರ್ ಅವರಿಗೆಅತ್ಯುತ್ತಮ ಸಹನಟ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಅವರು ಈ ಪ್ರಶಸ್ತಿಯನ್ನು ಕಿವುಡ, ಅಂಗವಿಕಲ ಸಮುದಾಯ ಮತ್ತು 'ಕೊಡ' ಚಿತ್ರತಂಡಕ್ಕೆ ಅರ್ಪಿಸಿದ್ದಾರೆ.
'ಕೊಡ'ಅಮೆರಿಕನ್ ಸೈನ್ ಲಾಂಗ್ವೇಜ್ (ಸಂಕೇತ ಭಾಷೆಯ) ಸಿನಿಮಾ ಆಗಿದೆ.
'ನಾನು ಇಲ್ಲಿ ಹಾಜರಿರುವುದು ಅದ್ಭುತ ಭಾವನೆ ಮೂಡಿಸುತ್ತಿದೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಕೆಲಸವನ್ನು ಗುರುತಿಸಿದ್ದಕ್ಕಾಗಿ ಅಕಾಡೆಮಿಗೆ ಧನ್ಯವಾದ ಹೇಳುತ್ತೇನೆ' ಎಂದು ಕೊಟ್ಸುರ್ ಅವರು ಅಮೆರಿಕನ್ ಸಂಕೇತ ಭಾಷೆ ವ್ಯಾಖ್ಯಾನಕಾರರ ಮೂಲಕ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.