ನೆಮ್ಮದಿಗಾಗಿ ಟ್ವಿಟರ್‌ಗೆ ಗುಡ್‌ಬೈ

7

ನೆಮ್ಮದಿಗಾಗಿ ಟ್ವಿಟರ್‌ಗೆ ಗುಡ್‌ಬೈ

Published:
Updated:
Prajavani

ಟ್ವಿಟರ್‌ನಲ್ಲಿ ತಮ್ಮ ಮೇಲಿನ ವಾಗ್ದಾಳಿ ಮತ್ತು ಟೀಕೆಗಳಿಂದ ರೋಸಿಹೋಗಿರುವ ಹಾಲಿವುಡ್‌ ನಟ ವಿಲ್‌ ಪೌಲ್ಟರ್‌ ತಮ್ಮ ಟ್ವಿಟರ್‌ ಖಾತೆಗೆ ಗುಡ್‌ಬೈ ಹೇಳಿದ್ದಾರೆ.

ಮಾನಸಿಕ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ, ನಿರ್ಗಮಿಸುವ ಮೊದಲು ಸ್ಪಷ್ಟನೆಯನ್ನೂ ನೀಡಿದ್ದಾರೆ.

ವಿಲ್‌ ಪೌಲ್ಟರ್‌ ಅವರ ‘ಬ್ಲ್ಯಾಕ್‌ ಮಿರರ್‌: ಬಂಡರ್‌ಸ್ನ್ಯಾಚ್‌’ ಎಂಬ, ನೆಟ್‌ಫ್ಲಿಕ್ಸ್‌ ಸರಣಿಯ ಪೂರ್ವ ಪ್ರದರ್ಶನ ಕಳೆದ ಡಿಸೆಂಬರ್‌ 28ರಂದು ಪ್ರಸಾರವಾದಾಗಿನಿಂದಲೂ ಅವರ ವಿರುದ್ಧ ಟೀಕೆಯ ಸುರಿಮಳೆಯಾಗಿತ್ತು. ಸರಣಿಯ ವಸ್ತು ಮತ್ತು ಪೌಲ್ಟರ್‌ ಪಾತ್ರದ ಬಗ್ಗೆ ವೀಕ್ಷಕರು ಮತ್ತು ವೃತ್ತಿರಂಗದ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ತಮ್ಮದೇ ಆದ ಸಾಹಸ ಮತ್ತು ವೈಜ್ಞಾನಿಕ ಕಾಲ್ಪನಿಕ ಕಾದಂಬರಿಯೊಂದನ್ನು ವಿಡಿಯೊ ಗೇಮ್‌ನ ಬಳಸಿಕೊಳ್ಳುವ ಪರಿಕಲ್ಪನೆ ಈ ಚಿತ್ರದಲ್ಲಿತ್ತು. ವೀಕ್ಷಕರು ಮತ್ತು ಗ್ರಾಹಕರೊಂದಿಗೆ ಸಂವಾದಿಯಾಗಿರುವ ವಿಡಿಯೊ ಗೇಮ್‌ಗಳನ್ನು ವಿನ್ಯಾಸ ಮಾಡುವ ಯುವಕನ ಪಾತ್ರ ಮಾಡಿದ್ದರು ಪೌಲ್ಟರ್‌. ಕೊಲಿನ್‌ ರಿಟ್ಮನ್‌ ಎಂಬ ಅನುಭವಿ ಪ್ರೋಗ್ರಾಮರ್‌ ಆಗಿ ಪೌಲ್ಟರ್‌ ಕಾಣಿಸಿಕೊಂಡಿದ್ದರು. 

ಸಾಮಾಜಿಕ ಮಾಧ್ಯಮದಲ್ಲಿ ಎದುರಾದ ಟೀಕೆಗಳಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ 25ರ ಹರೆಯದ ಪೌಲ್ಟರ್ ವಿವಾದದಿಂದ ದೂರವಿರುವ ತೀರ್ಮಾನ ಕೈಗೊಂಡಿದ್ದಾರೆ. ಹಾಗಂತ ಟ್ವಿಟರ್‌ನಲ್ಲಿ ಟೀಕೆಗಳು ಮಾತ್ರ ನಿಂತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !