ಶುಕ್ರವಾರ, ನವೆಂಬರ್ 22, 2019
26 °C

ವಿನೀತ್‌–ಊರ್ವಶಿ ಜೋಡಿ ತೆರೆಗೆ

Published:
Updated:
Prajavani

ತಮಿಳು ಚಿತ್ರ ‘ತಿರಿಟ್ಟು ಪಯಲೆ 2’ ಹಿಂದಿ ರಿಮೇಕ್‌ನಲ್ಲಿ ನಟ ವಿನೀತ್‌ ಕುಮಾರ್‌ ಸಿಂಗ್‌ ಜೋಡಿಯಾಗಿ ಪಾಗಲ್‌ಪಂಥಿ ಖ್ಯಾತಿಯ ನಟಿ ಊರ್ವಶಿ ರೌಟೆಲಾ ಅಭಿನಯಿಸಲಿದ್ದಾರೆ. ವಿನೀತ್‌ ‘ಸಾಂಡ್‌ ಕೀ ಆಂಖ್‌’ ಚಿತ್ರದಲ್ಲಿ ನಟಿಸಿದ್ದರು. 

‘ತಿರಿಟ್ಟು ಪಯಲೆ 2’ ಹಿಂದಿ ರಿಮೇಕ್‌ ಚಿತ್ರವನ್ನು ಸುಶಿ ಗಣೇಶನ್‌ ನಿರ್ದೇಶನ ಮಾಡಲಿದ್ದಾರೆ. ತಮಿಳು ಮೂಲ ಚಿತ್ರವನ್ನೂ ಅವರೇ ನಿರ್ದೇಶನ ಮಾಡಿದ್ದಾರೆ

ಈ ರಿಮೇಕ್‌ ಚಿತ್ರಕ್ಕೆ ಇನ್ನಷ್ಟೇ ಹೆಸರಿಡಬೇಕಿದ್ದು, ಚಿತ್ರೀಕರಣ ಈಗಾಗಲೇ ಆರಂಭವಾಗಿದೆ.  ವಾರಾಣಸಿ ಹಾಗೂ ಲಖನೌಗಳಲ್ಲಿ ಶೂಟಿಂಗ್‌ ನಡೆಯುತ್ತಿದೆ. ಈ ಚಿತ್ರದ ವಿಲನ್ ಪಾತ್ರಕ್ಕೆ ನಟನನ್ನು ಇನ್ನಷ್ಟೇ ಘೋಷಣೆ ಮಾಡಬೇಕಿದೆ.

ತಮಿಳು ಮೂಲಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಬಾಬಿ ಸಿಂಹ ನಟಿಸಿದ್ದರು. ಅವರ ಪತ್ನಿಯಾಗಿ ಅಮಲಾ ಪೌಲ್‌ ಪಾತ್ರವನ್ನು ನಿರ್ವಹಿಸಿದ್ದರು. ಪ್ರಮುಖ ಖಳನಟನಾಗಿ ಪ್ರಸನ್ನ ನಟಿಸಿದ್ದರು.  ನಿರ್ದೇಶಕ ಸುಶಿ ಗಣೇಶನ್‌ ಸಹ ಡಿಟೆಕ್ವಿವ್‌ ಗಣೇಶ ಎಂಬ ಪಾತ್ರ ಮಾಡಿದ್ದರು.

ಪ್ರತಿಕ್ರಿಯಿಸಿ (+)