‘ವಾಸಂತಿ ನಲಿದಾಗ’ ಹೀಗೊಂದು ವಿಭಿನ್ನ ಶೀರ್ಷಿಕೆ ಹೊತ್ತ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಕಾಲೇಜು, ಯುವಮನಸ್ಸುಗಳ ಸುತ್ತ ಈ ಚಿತ್ರದ ಕಥೆಯಿದೆಯಂತೆ. ಇತ್ತೀಚೆಗಷ್ಟೇ ಈ ಚಿತ್ರದ ಶೀರ್ಷಿಕೆ ಟೈಟಲ್ ಕೇಳಿ ಇದೊಂದು ಕಾಮಿಡಿ ಜಾನರ್ ಸಿನಿಮಾ ಅಂದುಕೊಂಡವರಿಗೆ ಚಿತ್ರತಂಡ ನೀಡುವ ಉತ್ತರ ಪಕ್ಕಾ ಕಾಲೇಜ್ ಯೂತ್ ಲವ್ ಸ್ಟೋರಿ ಸಬ್ಜೆಕ್ಟ್ ಸಿನಿಮಾ ಎಂದು. ಹೀಗೆ ಟೈಟಲ್ ಮೂಲಕವೇ ಸುದ್ದಿಯಲ್ಲಿರುವ ಈ ಚಿತ್ರದ ವೀಡಿಯೋ ಸಾಂಗ್ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಹೌದು, ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯದಲ್ಲೂ ಬ್ಯುಸಿಯಾಗಿದೆ. ಚಿತ್ರದ ಬಹು ನಿರೀಕ್ಷಿತ ಹಾಡಾದ ‘ಕೇಳ್ರಪ್ಪೋ ಕೇಳಿ’ ಹಾಡನ್ನು ಬಿಡುಗಡೆ ಮಾಡಿ ಗಮನ ಸೆಳೆದಿದೆ. ಹಾಡಿಗೆ ಗೌಸ್ ಫೀರ್ ಸಾಹಿತ್ಯವಿದೆ. ಶ್ರೀ ಗುರು ಅವರ ಸಂಗೀತ ನಿರ್ದೇಶನವಿದೆ. ಸ್ಟಾರ್ ಸಿಂಗರ್ ಶಶಾಂಕ್ ಶೇಷಗಿರಿ, ಪ್ರಿಯಾಂಕ ಶ್ರೀಗುರು, ಶ್ರೀಗುರು ಹಾಡಿಗೆ ದನಿಯಾಗಿದ್ದಾರೆ.

ಮುಖ್ಯ ಭೂಮಿಕೆಯಲ್ಲಿ ರೋಹಿತ್ ಶ್ರೀಧರ್, ಭಾವನ ಶ್ರೀನಿವಾಸ್, ಜೀವಿತಾ ವಸಿಷ್ಠ ನಟಿಸಿದ್ದಾರೆ. ಜೇನುಗೂಡು ಬ್ಯಾನರ್ ಅಡಿ ಸಿನಿಮಾ ನಿರ್ಮಾಣವಾಗಿದ್ದು, ಜೇನುಗೂಡು ಕೆ.ಎನ್ ಶ್ರೀಧರ್ ಬಂಡವಾಳ ಹೂಡಿದ್ದು, ರವೀಂದ್ರ ವಂಶಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ರವೀಂದ್ರ ವಂಶಿ ಈ ಹಿಂದೆ ಪುಟಾಣಿ ಸಫಾರಿ, ವರ್ಣಮಯ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ರೋಮ್ಯಾಂಟಿಕ್ ಕಥಾಹಂದರ, ಕಾಲೇಜ್ ಯೂತ್ ಲವ್ ಸ್ಟೋರಿ ಒಳಗೊಂಡ ಸಬ್ಜೆಕ್ಟ್ ಹೊತ್ತು ಹೊಸ ಪ್ರತಿಭೆಗಳೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಸಿನಿಮಾ ತೆರೆಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.