ವಿಕ್ಕಿ ಕೌಶಲ್ ಜೊತೆ ಕತ್ರೀನಾ ಡೇಟಿಂಗ್?

ಬುಧವಾರ, ಜೂನ್ 19, 2019
22 °C

ವಿಕ್ಕಿ ಕೌಶಲ್ ಜೊತೆ ಕತ್ರೀನಾ ಡೇಟಿಂಗ್?

Published:
Updated:
Prajavani

ಬಾಲಿವುಡ್ ನಟಿ ಕತ್ರೀನಾ ಕೈಫ್ ಮತ್ತು ‘ಉರಿ’ಖ್ಯಾತಿಯ ನಟ ವಿಕ್ಕಿ ಕೌಶಲ್ ಡೇಟಿಂಗ್‌ನಲ್ಲಿದ್ದಾರೆಯೇ? ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಇತ್ತೀಚೆಗಷ್ಟೇ ರಣಬೀರ್ ಕಪೂರ್ ಜತೆಗೆ ತಾವು ಸಂಬಂಧ ಕಡಿದುಕೊಂಡಿರುವುದಾಗಿ ಕತ್ರೀನಾ ದೃಢಪಡಿಸಿದ್ದರು. ಇದೇ ಸಮಯದಲ್ಲಿ ವಿಕ್ಕಿ ಕೂಡಾ ತಮ್ಮ ಗೆಳತಿ ಹರ್ಲಿನ್ ಸೇಥಿ ಜತೆಗೆ ಬ್ರೇಕ್ಅಪ್ ಆಗಿದೆಯೆಂದು ಹೇಳಿಕೊಂಡಿದ್ದರು. ಇಬ್ಬರು ಭಗ್ನಪ್ರೇಮಿಗಳು ಒಂದೇ ಹಾದಿಯಲ್ಲಿರುವುದರಿಂದ ಈಗ ಡೇಟಿಂಗ್‌ನಲ್ಲಿರಬಹುದು ಅನ್ನುತ್ತಿದೆ ಬಾಲಿವುಡ್‌. 

ಇತ್ತೀಚೆಗಷ್ಟೇ 31ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ವಿಕ್ಕಿ, ಗೆಳತಿ ಹರ್ಲಿನ್‌ ಜತೆಗೆ ಊಟಕ್ಕೆಂದು ಹೊರಗೆ ಹೋದಾಗ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದರು. ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ‘ತಾವಿನ್ನೂ ಸಿಂಗಲ್ ಎಂದೂ, ಕತ್ರೀನಾ ಜತೆಗಿನ ರೊಮಾನ್ಯ ಸುದ್ದಿಯೇನಿದ್ದರೂ ಗಾಳಿಸುದ್ದಿ’ ಎಂದೂ ವಿಕ್ಕಿ ಸ್ಪಷ್ಟಪಡಿಸಿದ್ದರು. 

ಕರಣ್ ಜೋಹರ್‌ ಅವರ ‘ಕಾಫಿ ವಿತ್ ಕರಣ್’ ಟಾಕ್ ಷೋನಲ್ಲಿ ಕತ್ರೀನಾ ಕೈಫ್ , ಸಲ್ಮಾನ್  ಖಾನ್ ಮತ್ತು ವಿಕ್ಕಿ ಕೌಶಲ್ ಭಾಗವಹಿಸಿದ್ದರು. ಷೋನಲ್ಲಿ ವಿಕ್ಕಿ, ಮಾತಿನಲ್ಲಿಯೇ ಕತ್ರೀನಾಳ ಕಾಲೆಳೆದಿದ್ದರು. ಆಗ ಸಲ್ಮಾನ್ ಮೌನವಾಗಿಯೇ ಪ್ರತಿಕ್ರಿಯಿಸಿದ್ದರು. ಈ ಷೋನ ವಿಡಿಯೊವೊಂದು ವೈರಲ್ ಆಗಿದ್ದು, ಅದರಲ್ಲಿ ವಿಕ್ಕಿ, ಕತ್ರೀನಾಗೆ ‘ಮುಝ್‌ಸೇ ಶಾದಿ ಕರೋಗಿ’ ಎಂದು ಭಾವುಕವಾಗಿಯೇ ಹಾಡಿದ್ದರು. ಇದಕ್ಕೂ ಮುನ್ನ ಕತ್ರೀನಾ ವಿಕ್ಕಿಕೌಶಲ್‌ನಂಥ ಒಳ್ಳೆಯ ಹುಡುಗ ಸಿಕ್ಕರೆ ತಾವು ಮದುವೆಯಾಗುವುದಾಗಿ ಹೇಳಿದ್ದರು. ವಿಕ್ಕಿಯ ಹಾಡಿಗೆ ಕತ್ರೀನಾ ಮುಗುಳುನಗೆ ಚೆಲ್ಲಿ ಪ್ರತಿಕ್ರಿಯಿಸಿದ್ದರೆ, ಸಲ್ಮಾನ್ ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು. ಅಷ್ಟೇ ಅಲ್ಲ ಇದನ್ನು ನೋಡಲಾಗದೇ ಸಲ್ಲೂ ತಂಗಿ ಅರ್ಪಿತಾಳ ಹೆಗಲ ಮೇಲೆ ತಲೆಇಟ್ಟು ಮುಖ ಮುಚ್ಚಿಕೊಂಡಿದ್ದರು.

ಒಟ್ಟಿನಲ್ಲಿ ಕತ್ರೀನಾ ಮತ್ತು ವಿಕ್ಕಿ ನಡುವೆ ಸಂಥಿಂಗ್, ಸಂಥಿಂಗ್ ನಡೆಯುತ್ತಿರಬಹುದು ಎಂಬುದು ಬಾಲಿವುಡ್‌ನ ಲೆಕ್ಕಾಚಾರ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !